ಮುಂಬೈ : ದುಬೈನಲ್ಲಿ ಮಂಗಳವಾರ ಕೊನೆಗೊಂಡಿರುವ ಐಪಿಎಲ್‌ನಲ್ಲಿ ಐದನೆ ಬಾರಿ ಚಾಂಪಿಯನ್ ಆಗಿರುವ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ)ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆೆ ಎಂದು ಮೂಲಗಳು ತಿಳಿಸಿವೆ.
ಕೃನಾಲ್ ಸಂಜೆ 5 ಗಂಟೆಗೆ ವಿಮಾನದಲ್ಲಿ ಯುಎಇಯಿಂದ ವಾಪಸಾದ ತಕ್ಷಣವೇ ಡಿಆರ್‌ಐ ಸಿಬ್ಬಂದಿ ಅವರನ್ನು ತಡೆದು ತಪಾಸಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಲ್‌ರೌಂಡರ್ ಕೃನಾಲ್ ಪಾಂಡ್ಯ ದುಬೈನಲ್ಲಿ ಮಂಗಳವಾರ ಕೊನೆಗೊಂಡಿರುವ ಐಪಿಎಲ್‌ನಲ್ಲಿ ಐದನೆ ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಸದಸ್ಯನಾಗಿದ್ದಾರೆ.