- Advertisement -
ಮಂಗಳೂರು : ಅಸ್ಪಾಕ್ ರಜಾಕ್ ಮತ್ತು ಡಾ. ಅನಂತ್ ಪ್ರಭು ನೇತೃತ್ವದಲ್ಲಿ ಎರಡನೇ ಬಾರಿ ಅನಾಥಾಶ್ರಮಗಳಿಗೆ ತೆರೆಳಿ ಆಟಿಕೆಗಳನ್ನು ವಿತರಿಸುವ ಕಾರ್ಯಕ್ರಮ ಮಂಗಳೂರು ಕಂಕನಾಡಿಯಲ್ಲಿ ಇಂದು ನಡೆಯಿತು.
ಈ ಹಿಂದೆ ಸ್ನೇಹಾಲಯ ಬಿಜೈ, ಫಾದರ್ ಮುಲ್ಲರ್ ಕಂಕನಾಡಿ, ಭಗಿನಿ ಸಮಾಜ ಜೆಪ್ಪು,, ಕುತ್ತಾರ್ ಆಶ್ರಮ, ಹಿದಾಯತ್ ಪೌಂಡೇಶನ್, ಶೇರ್ ಅಂಡ್ ಕೇರ್ ಕುಂಜಾಲ್ ಕಟ್ಟೆ, ಇಫ್ಯಾಂಟ್ ಮೇರಿ ಚಿಲ್ಡ್ರನ್ ಹೋಮ್ ಕುಲಶೇಖರ, ರಿಯಾ ಫೌಂಡೇಶನ್, ಕುಲಶೇಖರ, ಸಂವೇದನಾ ಪಂಪವೆಲ್, ಸ್ನೇಹ ಧಾಮ ಗುರುಪುರ ಮೊದಲಾದ 13 ಆಶ್ರಮಗಳಿಗೆ ಭೇಟಿ ನೀಡಿ ಆಟಿಕೆಗಳನ್ನು ಮಂಗಳೂರು ವಾರ್ತೆ ತಂಡ ನೀಡಿತ್ತು.
