Tuesday, June 6, 2023
Homeಕರಾವಳಿಆಹಾರದ ಹಕ್ಕನ್ನು ಸಂರಕ್ಷಿಸಲು ಪ್ರತಿಭಟನಾ ಪ್ರದರ್ಶನ

ಆಹಾರದ ಹಕ್ಕನ್ನು ಸಂರಕ್ಷಿಸಲು ಪ್ರತಿಭಟನಾ ಪ್ರದರ್ಶನ

- Advertisement -


Renault

Renault
Renault

- Advertisement -

ಮಂಗಳೂರು : ಜನತೆಯ ಆಹಾರದ ಹಕ್ಕನ್ನು ಸಂರಕ್ಷಿಸಲು,ಸ್ವಚ್ಛ ಆಹಾರಕ್ಕಾಗಿ,ಸುಸಜ್ಜಿತವಾದ ಜಾನುವಾರು ವಧಾಗ್ರಹದ ನಿರ್ಮಾಣಕ್ಕಾಗಿ ಒತ್ತಾಯಿಸಿ, ಆಹಾರದ ಹಕ್ಕು ಸಂರಕ್ಷಣಾ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಪ್ರದರ್ಶನ ಜರುಗಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್, CPIM,CPI,JDS ಪಕ್ಷಗಳು ಸೇರಿದಂತೆ ವಿಧ್ಯಾರ್ಥಿ ಯುವಜನ ಮಹಿಳಾ ದಲಿತ ಸಂಘಟನೆಗಳು ಭಾಗವಹಿಸಿದ್ದವು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ JDS ರಾಜ್ಯ ನಾಯಕರಾದ ಎಂ.ಬಿ.ಸದಾಶಿವರವರು, ಆಹಾರ ಸೇವನೆಯ ವಿಚಾರ ಪ್ರತಿಯೊಬ್ಬರ ತೀರಾ ಖಾಸಗೀ ವಿಷಯವಾಗಿದ್ದು,ಅದನ್ನು ರಾಜಕೀಯಗೊಳಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಕೋಮುವಾದಿ ಶಕ್ತಿಗಳ ಹುನ್ನಾರಗಳನ್ನು ಬಯಲಿಗೆಳೆಯಬೇಕಾಗಿದೆ. ಜನತೆಯ ಆಹಾರದ ಹಕ್ಕನ್ನು ಸಂರಕ್ಷಿಸುವುದು,ಸ್ವಚ್ಛ ಪೌಷ್ಠಿಕ ಆಹಾರವನ್ನು ಒದಗಿಸುವುದು ಸರಕಾರಗಳ ಕರ್ತವ್ಯ.ಇಡೀ ದೇಶದಲ್ಲಿ 71% ಮಾಂಸಾಹಾರಿಗಳಿದ್ದು,ಅವರಿಗೆ ಪೂರಕವಾಗಿ ಸುಸಜ್ಜಿತವಾದ ಕುರಿ ಆಡು ಜಾನುವಾರು ವಧಾಗ್ರಹಗಳನ್ನು ನಿರ್ಮಾಣ ಮಾಡಬೇಕಾದದ್ದು ಸರಕಾರಗಳ ಜವಾಬ್ದಾರಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು, ಜಾನುವಾರು ಸಾಗಾಟದ ವಾಹನದಲ್ಲಿ ಎತ್ತು ಕೋಣ ಎಮ್ಮೆಗಳಿದ್ದರೂ ವಿನಾಃ ಕಾರಣ ತಡೆಯಲಾಗುತ್ತಿದೆ.ಹಾಗೂ ಅವರ ಮೊಬೈಲ್ ಹಣವನ್ನು ಲೂಟಿ ಮಾಡಲಾಗುತ್ತದೆ.ಎಲ್ಲಾ ಅದಿಕ್ರತ ದಾಖಲೆಗಳನ್ನು ಹೊಂದಿದ್ದರೂ ವಿನಾಃ ಕಾರಣ ಕಳ್ಳತನದ ಕೇಸ್ ಜಡಿದು ಮಾಂಸ ವ್ಯಾಪಾರಸ್ಥರನ್ನು ಜೈಲಿಗೆ ತಳ್ಳುವುದು,ಹಲ್ಲೆ ನಡೆಸುವುದು ವ್ಯಾಪಕವಾಗಿ ನಡೆಯುತ್ತಿದೆ ಎಂದು ಹೇಳಿದರು.

CPIM ಜಿಲ್ಲಾ ನಾಯಕರಾದ ಕೆ.ಯಾದವ ಶೆಟ್ಟಿಯವರು ಮಾತನಾಡುತ್ತಾ, ಗೋಹತ್ಯೆ, ಗೋಸಾಗಾಟದ ವಿಷಯದಲ್ಲಿ ಕಳೆದ 25 ವರ್ಷಗಳಲ್ಲಿ ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಮುಸ್ಲಿಂ ಸಮುದಾಯದವರನ್ನೇ ಗುರಿಯನ್ನಾಗಿಸಿ, ಅಮಾಯಕ ಕೆಳವರ್ಗದ ಯುವಕರನ್ನು ಜೈಲುಪಾಲಾಗುವಂತೆ ಮಾಡಿದ ಕೀರ್ತಿ ಬಿಜೆಪಿ ಸಂಘಪರಿವಾರಕ್ಕೆ ಸಲ್ಲುತ್ತದೆ. ಕೇರಳದಲ್ಲಿ ಬಿಜೆಪಿ ಗೆದ್ದರೆ ದನದ ಮಾಂಸ ಒದಗಿಸುವುದಾಗಿಯೂ,ತಾನು ಅಧಿಕಾರದಲ್ಲಿರುವ ಗೋವಾ,ತ್ರಿಪುರ, ಮೇಘಾಲಯ ಮುಂತಾದ ಕಡೆಗಳಲ್ಲಿ ದನದ ಮಾಂಸವನ್ನು ನಿಷೇಧ ಮಾಡುವುದಿಲ್ಲ ಎಂದು ಬಹಿರಂಗವಾಗಿ ಸಾರುವ ಬಿಜೆಪಿ,ದ.ಕ.ಜಿಲ್ಲೆಯಲ್ಲಿ ಮಾತ್ರ ಜನರಲ್ಲಿ ವ್ಯತಿರಿಕ್ತವಾಗಿ ವರ್ತಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರೂ,ಮಾಜಿ ಶಾಸಕರಾದ ಐವನ್ ಡಿಸೋಜ ರವರು ಮಾತನಾಡುತ್ತಾ, ಜನರ ಬದುಕಿನ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲದ ಬಿಜೆಪಿ, ಕರಾವಳಿ ಜಿಲ್ಲೆಯಲ್ಲಿ ಜನರ ಭಾವನೆಗಳನ್ನು ನಿರಂತರವಾಗಿ ಕೆರಳಿಸಿ ಸೌಹಾರ್ದತೆಯನ್ನು ನಾಶಗೊಳಿಸಿದೆ.ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸುಸಜ್ಜಿತ ವಧಾಗ್ರಹದ ನಿರ್ಮಾಣಕ್ಕಾಗಿ ಮೀಸಲಿರಿಸಿದ ಹಣವನ್ನು ರದ್ದುಗೊಳಿಸಿರುವುದು ಕಾನೂನುಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.

CPI ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜರವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ದ್ವಂದ್ವ ನೀತಿಗಳನ್ನು ಖಂಡಿಸುತ್ತಾ, ಜಾಗತಿಕ ಮಟ್ಟದಲ್ಲಿ ದನದ ಮಾಂಸ ರಪ್ತು ಮಾಡುವುದರಲ್ಲಿ ಭಾರತ ಇಂದಿಗೂ ಪ್ರಥಮ ಸ್ಥಾನದಲ್ಲಿದೆ. ಇದು ದೇಶದ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ವಿಶೇಷ ಕೊಡುಗೆ ನೀಡಿದೆ ಎಂದು ಹೇಳಿದರು.

ಹೋರಾಟವನ್ನು ಬೆಂಬಲಿಸಿ ಮಾಜಿ ಶಾಸಕರಾದ ಮೊಯಿದಿನ್ ಭಾವ,ಮಾಜಿ ಮೇಯರ್ ಅಶ್ರಫ್,ಮಾಂಸ ವ್ಯಾಪಾರಸ್ಥರ ಸಂಘದ ಮುಖಂಡರಾದ ಆಲಿ ಹಸನ್, DYFI ಜಿಲ್ಲಾ ನಾಯಕರಾದ ಅಶ್ರಫ್ ಕೆ.ಸಿ.ರೋಡ್ ರವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಸದಾಶಿವ ಉಳ್ಳಾಲ, ಮುಸ್ತಾಫ,CPIM ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್,ವಾಸುದೇವ ಉಚ್ಚಿಲ,CPI ನಾಯಕರಾದ ವಿ.ಕುಕ್ಯಾನ್,ಕರುಣಾಕರ್,ಬಿ.ಶೇಖರ್,ಸುರೇಶ್ ಬಂಟ್ವಾಳ, JDS ನಾಯಕರಾದ ಪ್ರವೀಣ್ ಚಂದ್ರ ಜೈನ್,ಸುಮತಿ ಹೆಗ್ಡೆ,ಅಜೀಜ್ ಕುದ್ರೋಳಿ, ದಲಿತ ಸಂಘಟನೆಗಳ ಮುಖಂಡರಾದ ಎಂ.ದೇವದಾಸ್,ತಿಮ್ಮಯ್ಯ ಕೊಂಚಾಡಿ,INTUC ನಾಯಕರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ,ಮಾಂಸ ವ್ಯಾಪಾರಸ್ಥರ ಸಂಘದ ನಾಯಕರಾದ ಯಾಸಿನ್ ಕುದ್ರೋಳಿ, ಅಬ್ದುಲ್ ಖಾದರ್,ಮುಸ್ತಾಕ್ ಆಲಿ, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ, ಅಶುಂತಾ ಡಿಸೋಜ, ಕಾರ್ಪೋರೇಟರ್ ಶಂಶುದ್ದೀನ್, ಅಬ್ದುಲ್ ಲತೀಫ್,ವಕೀಲರ ಸಂಘಟನೆಯ ಯಶವಂತ ಮರೋಳಿ,ರಾಮಚಂದ್ರ ಬಬ್ಬುಕಟ್ಟೆ,ಶಾಲಿನಿ,DYFI ನಾಯಕರಾದ ನವೀನ ಕೊಂಚಾಡಿ,ರಫೀಕ್ ಹರೇಕಳ, CITU ಮುಖಂಡರಾದ ನಾಗೇಶ್ ಕೋಟ್ಯಾನ್,ಮಹಿಳಾ ಸಂಘಟನೆಯ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ,ಜಯಲಕ್ಷ್ಮಿ,ಮಾಜಿ ಜಾರ್ಪೋರೇಟರ್ ಅಬೂಬಕ್ಕರ್,ಸಾಮಾಜಿಕ ಹೋರಾಟಗಾರರಾದ ಕಬೀರ್ ಉಳ್ಳಾಲ,ಮೊಯಿದಿನ್ ಮೋನು,ಆಶ್ರಫ್ ಕಿನಾರೆ,ವಹಾಬ್ ಕುದ್ರೋಳಿ ಮುಂತಾದವರು ಭಾಗವಹಿಸಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments