ಹಾಸನ: ಸೋಮವಾರ ವಿವಾಹ ನಿಗದಿಯಾಗಿದ್ದ ಮಧುಮಗಳಿಗೆ ಮಾಜಿ ಪ್ರಿಯಕರನಿಂದ ಬಲವಂತವಾಗಿ ತಾಳಿಕಟ್ಟಿರುವ ಘಟನೆ ಜಿಲ್ಲೆಯ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ಯುವತಿ ಮನೆಯಲ್ಲಿ ನಡೆದಿದೆ.

ತಾನು ಆಕೆಯನ್ನ ಪ್ರೀತಿಸುತ್ತಿರೋದಾಗಿ ಮನೆಗೆ ಬಂದು ಬೆದರಿಸಿ ತಾಳಿಕಟ್ಟಿ ಕರೆದೊಯ್ದಿದ್ದಾರೆ ಎಂದು ಅರೆಕೆರೆ ಗ್ರಾಮದ ಯುವಕ ಸತೀಶ್ ವಿರುದ್ದ ಯುವತಿ ಪೋಷಕರ ಆರೋಪ ಮಾಡುತ್ತಿದ್ದಾರೆ. ಜನವರಿ 25 ಕ್ಕೆ ಸುಜಿತ್ ಕೃಷ್ಣ ಎಂಬುವವರ ಜೊತೆ ಯುವತಿಯ ಮಧುವೆ ನಿಶ್ಚಯವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಧುವೆ ನಿಶ್ಚಯಿಸಿ ಕುಟುಂಬದವರು ಎಲ್ಲಾ ತಯಾರಿಮಾಡಿಕೊಂಡಿದ್ದರು.

ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದನಂತೆ..

ಮಧುವೆ ನಿಶ್ಚಯವಾಗಿರೋ ಹುಡುಗಿಯನ್ನು ತಾನು ಪ್ರೀತಿಸುತ್ತಿರೋದಾಗಿ ಸತೀಶ್ ಹೇಳಿಕೊಂಡಿದ್ದ.

ಅಲ್ಲದೆ ಆಕೆ ಬೇರೆ ಮದುವೆ ಆಗುತ್ತಿರುವುದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ವಿಷಯ ತಿಳಿದ ಆತನ ಸ್ನೇಹಿತರು, ಸತೀಶ್‌ನನ್ನು ಯುವತಿ ಮನೆಗೆ ಕರೆದೊಯ್ದು ಅಲ್ಲೇ ಯುವತಿಯೊಂದಿಗೆ ಮಧುವೆ ಮಾಡಿದ್ದಾರೆ.

ತಮ್ಮ ಮಗಳಿಗೆ ಇಷ್ಟವಿಲ್ಲದಿದ್ದರೂ ತಮ್ಮನ್ನ ಬೆದರಿಸಿ ಬಲವಂತವಾಗಿ ಮನೆಯೊಳಗೇ ಅರಿಶಿಣಕೊಂಬು ಕಟ್ಟಿ ಮಧುವೆ ಮಾಡಿದ್ದಾರೆ. ಹೀಗಾಗಿ ತಮ್ಮ ಮಗಳ ಪ್ರಾಣಕ್ಕೆ ಬೆದರಿಕೆ ಇದ್ದು ಆಕೆಯನ್ನು ರಕ್ಷಿಸಿ ಎಂದು ಯುವತಿಯ ತಾಯಿಯಿಂದ ಸಕಲೇಶಪುರ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಜನವರಿ 21 ರಂದು ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಪ್ರಕರಣ ದಾಖಲಿಸಿಕೊಂಡ ಸಕಲೇಶಪುರ ನಗರ ಠಾಣೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here