- Advertisement -
ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರ ವತಿಯಿಂದ ಎಬಿವಿಪಿ ವಿಭಾಗ ಕಾರ್ಯಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತವಾಗಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಶಾರದಾ ಪೂಜೆಯನ್ನು ಅದ್ಧುರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರದ ವಿವಧ ಕಾಲೇಜುಗಳ ವಿದ್ಯಾರ್ಥಿ ನಾಯಕರೂ ಉಪಸ್ಥಿತರಿದ್ದರು. ಪೂಜೆಯ ನಂತರ ಚಂಡೆ ಹಾಗೂ ಹುಲಿ ಕುಣಿತ ನಡೆಸಲಾಯಿತು. ಪೂಜೆಯನ್ನು ಎಬಿವಿಪಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ಮೀಸೆ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಸಿದರು. ಕಾರ್ಯಕ್ರಮದಲ್ಲಿ ಕಾರ್ಯಕರ್ತರಾದ ನಿಶಾನ್ ಆಳ್ವ, ಶ್ರೇಯಸ್ ಶೆಟ್ಟಿ, ಸಂದೇಶ್ ಶೆಟ್ಟಿ, ದೀಪ್ತಿ, ಸುಶಾನ, ಆದಿತ್ಯ ಕೆ. ಆರ್, ಸ್ವಸ್ತಿಕ್ ಮುಂತಾದವರು ಉಪಸ್ಥಿರಿದ್ದರು.