ಮಂಗಳೂರು : ಕಾಂಗ್ರೆಸ್ ಹಿರಿಯ ಮುಖಂಡ, ಮಂಗಳೂರು ಮನಪಾ ಮಾಜಿ ಮೇಯರ್ ಕೆ.ಕೃಷ್ಣಪ್ಪ ಮೆಂಡನ್ (89) ನಗರದ ಅಳಪೆಯಲ್ಲಿನ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಕೆ.ಕೃಷ್ಣಪ್ಪ ಮೆಂಡನ್ ನಗರ ಪಾಲಿಕೆಯ ಕಂಕನಾಡಿ, ಅಳಪೆ ವಾರ್ಡ್ನಿಂದ ನಾಲ್ಕು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಇವರು, ಸರಳ ಸಜ್ಜನ ರಾಜಕಾರಣಿಯೆಂದೇ ಗುರುತಿಸಲ್ಪಟ್ಟಿದ್ದರು.
ಅಳಪೆ ಕರ್ಮಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಕರಾವಳಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ನಿರ್ದೇಶಕ, ಕಂಕನಾಡಿ ಯುವಕ ವೃಂದದ ಸ್ಥಾಪಕ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ದ.ಕ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷರಾಗಿ ಸಾಮಾಜಿಕ ಮುಖಂಡರಾಗಿದ್ದರು.
ಕೆ.ಕೃಷ್ಣಪ್ಪ ಮೆಂಡನ್ ಅವರು ಪತ್ನಿ ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.