ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮತ ಎಣಿಕೆ ಆರಂಭ ವಾಗಿದ್ದು ರಾಜ್ಯದಲ್ಲಿ ಎಲ್ ಡಿ ಎಫ್ ಗೆ ಮುನ್ನಡೆ ಲಭಿಸಿದೆ.
941 ಗ್ರಾಮ ಪಂಚಾಯತ್ ಗಳಲ್ಲಿ ಎಲ್ ಡಿ ಎಫ್ 311, ಯುಡಿಎಫ್ 294, ಎನ್ ಡಿಎ 23 ಮತ್ತು ಇತರರರು 54 , 152 ಬ್ಲಾಕ್ ಪಂಚಾಯತ್ ಗಳಲ್ಲಿ ಎಲ್ ಡಿ ಎಫ್ 83, ಯು ಡಿ ಎಫ್ 3, ಇತರರು 2, 14 ಜಿಲ್ಲಾ ಪಂಚಾಯತ್ ಗಳ ಪೈಕಿ 10 ರಲ್ಲಿ ಎಲ್ ಡಿ ಎಫ್ , ಯುಡಿಎಫ್ ನಾಲ್ಕ ರಲ್ಲಿ ಮುನ್ನಡೆಯಲ್ಲಿದೆ.
ನಗರಸಭೆಯಲ್ಲಿ ಎಲ್ ಡಿಎಫ್ 40, ಯುಡಿಎಫ್ 35 , ಎನ್ ಡಿಎ 3, ಇತರರರು 7, ಮಹಾನಗರಪಾಲಿಕೆಯ ಎಲ್ ಡಿಎಫ್ 4, ಯುಡಿಎಫ್ 2 ರಲ್ಲಿ ಮುನ್ನಡೆಯಲ್ಲಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ ಎಲ್ ಡಿ ಎಫ್ ಗೆ ಮುನ್ನಡೆ. ಎಲ್ ಡಿ ಎಫ್ 4 , ಬಿಜೆಪಿ, ಯು ಡಿ ಎಫ್ ಗೆ ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆಯಾಗಿದೆ. ವರ್ಕಾಡಿ, ಮುಳಿಗದ್ದೆ, ಪೆರ್ಮುದೆ, ಎಣ್ಮಕಜೆಯಲ್ಲಿ ಎಲ್ ಡಿಎಫ್, ಬಡಾಜೆಯಲ್ಲಿ ಯುಡಿಎಫ್, ಕುಂಜತ್ತೂರಿನಲ್ಲಿ ಬಿಜೆಪಿಗೆ ಮುನ್ನಡೆಯಾಗಿದೆ. ಕಾರಡ್ಕ ಬ್ಲಾಕ್ ನಲ್ಲೂ ಎಲ್ ಡಿ ಎಫ್ ಗೆ ಮುನ್ನಡೆ, 12 ಗ್ರಾಮ ಪಂಚಾಯತ್ ನಲ್ಲೂ ಎಲ್ ಡಿಎಫ್ ಗೆ ಮುನ್ನಡೆಯಾಗಿದೆ ಎಂದು ತಿಳಿದುಬಂದಿದೆ.