ಕಾಸರಗೋಡು : ಹದಿಮೂರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಕಾಸರಗೋಡು ಡಿ ವೈ ಎಸ್ ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡವು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತನನ್ನು ಅಹಮ್ಮದ್ ಕಬೀರ್ ಎಂದು ಗುರುತಿಸಲಾಗಿದೆ.
ಕಳವು ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ 13 ವರ್ಷಗಳಿಂದ ಈತ ತಲೆ ಮರೆಸಿಕೊಂಡಿದ್ದ. ಬೇಡಡ್ಕ ಠಾಣಾ ವ್ಯಾಪ್ತಿಯಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣದ ಆರೋಪಿಯಾಗಿದ್ದ. ಅಲ್ಲದೆ, ಕೇರಳ, ಕರ್ನಾಟಕ, ತಮಿಳುನಾಡು, ರಾಜಸ್ಥಾನ ಮೊದಲಡೆಗಳಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದನು.
ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡಿದ್ದ ಆರೋಪಿ ಎಂದು ಘೋಷಿಸಿತ್ತು. ಈತನ ವಿರುದ್ಧ ಕಾಸರಗೋಡು ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ವಾರಂಟ್ ಗಳಿವೆ.