ಮಂಗಳೂರು : ಕುಂಪಲ ಬೈಪಾಸ್ ಬಳಿ ಶುಕ್ರವಾರ ಸಂಜೆ ಕಾರು ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅಯಾನ್ (16) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಬಶೀರ್ ಅಹ್ಮದ್ ಮತ್ತು ರಿಯಾನ ದಂಪತಿ ಪುತ್ರ ಅಯಾನ್, ಜೆಪ್ಪು ಪ್ರೆಸ್ಟೀಜ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ಸಂಜೆ ವೇಳೆ ಮನೆ ಎದುರುಗಡೆಯ ಅಂಗಡಿಗೆ ತೆರಳಿದ್ದ ರಿಯಾನ್ ಹೆದ್ದಾರಿ ದಾಟಿ ಸಾಮಗ್ರಿ ಖರೀದಿಸಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು.
ಡಿಕ್ಕಿಯಾಗಿ ನಿಯಂತ್ರಣ ತಪ್ಪಿದ್ದ ಕಾರು ಸ್ಥಳದಲ್ಲೇ ಇರುವ ಮಸೀದಿ ಎದುರುಗಡೆಯ ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಈ ಸಂಬಂಧ ಮಂಗಳೂರು ಸಂಚಾರಿ ಠಾಣಾ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರ ಕಳೆಯುವುದರೊಳಗೆ ಇದು ಎರಡನೇ ಅಪಘಾತವಾಗಿದ್ದು, ಉಳ್ಳಾಲ ಬೈಲ್ನಲ್ಲಿ ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ.