Saturday, June 3, 2023
Homeಕರಾವಳಿಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.12ರಿಂದ 22ರವರೆಗೆ ನಡೆಯುವ ಚಂಪಾಷಷ್ಠಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.12ರಿಂದ 22ರವರೆಗೆ ನಡೆಯುವ ಚಂಪಾಷಷ್ಠಿ

- Advertisement -


Renault

Renault
Renault

- Advertisement -

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.12ರಿಂದ 22ರವರೆಗೆ ನಡೆಯುವ ಚಂಪಾಷಷ್ಠಿ ಆಚರಣೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದ್ದು, ಕೋವಿಡ್ 19 ನಿಯಾಗಳಿಗಾನುಸಾರವಾಗಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಛೇರಿ ಸಭಾಂಗಣದಲ್ಲಿ ಚಂಪಾಷಷ್ಠಿ ಜಾತ್ರೋತ್ಸವ ನಡೆಸುವ ಅಂಗವಾಗಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ಅವರು ಮಾತನಾಡಿದರು. ಉತ್ಸವ ನಡೆಸುವ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗಿದ್ದು, ಉರುಳು ಸೇವೆ, ಊಟೋಪಚಾರ, ವಸತಿ, ಕುಡಿಯುವ ನೀರು, ವಿದ್ಯುತ್ ಪೊರೈಕೆ ಸಂಬಂಧಿತ ವಿಚಾರಗಳ ಬಗ್ಗೆ, ಹೊರೆಕಾಣಿಕೆ ಯಾವ ರೀತಿಯಲ್ಲಿ ಸ್ವೀಕರಿಸಬೇಕು, ಅನ್ನಪ್ರಸಾದ ವಿತರಣೆ, ತುಲಾಭಾರ ಸೇವೆ, ಇತರೆ ಸೇವೆಗಳನ್ನು ನಡೆಸುವ ಬಗ್ಗೆ, ಜಾತ್ರಾ ಸಮಯದಲ್ಲಿ ನದಿಯ ಸ್ನಾನಘಟ್ಟದಲ್ಲಿ ನಡೆಯುವ ಉತ್ಸವ ಪೂರ್ವಭಾವಿಯಾಗಿ ಸ್ನಾನಘಟ್ಟದ ಹೂಳು ತೆಗೆಯುವ ಬಗ್ಗೆ, ಪಾರ್ಕಿಂಗ್, ಬಂಧೋಬಸ್ತ್, ವಾಹನ ವ್ಯವಸ್ಥೆ ಸೇರಿದಂತೆ ಇತರೆ ವಿಷಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕ್ರಮಕೈಗೊಳ್ಳುವ ಕುರಿತು ತೀರ್ಮಾನಿಸಲಾಯಿತು.

ಸೀಮಿತ, ಸರಳ ಆಚರಣೆ;
ಷಷ್ಠಿ ಆಚರಣೆಯನ್ನು ಸೀಮಿತ ಭಕ್ತರ ಸಮಾಕ್ಷಮದಲ್ಲಿ, ನಿಯಮಗಳನ್ನು ಅಳವಡಿಸಿಕೊಂಡು, ಸಾಕಷ್ಟು ಸರಳವಾಗಿ ಸಂಪ್ರದಾಯ, ನಿಯಮಗಳಿಗೆ ಧಕ್ಕೆಯಾಗದಂತೆ, ವ್ಯವಸ್ಥಿತವಾಗಿ ಆಚರಿಸಲು ತೀರ್ಮಾನಕೈಗೊಳ್ಳಲಾಯಿತು. ಭಕ್ತರು ಕ್ಷೇತ್ರದೊಂದಿಗೆ ಸಹಕರಿಸುವಂತೆ ಹಾಗೂ ರಥೋತ್ಸವ ಸೇವಾರ್ಥಿಗಳಿಗೆ ಸೀಮಿತ ಪಾಸುಗಳನ್ನು ಮಾತ್ರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಸುಳ್ಯ ಶಾಸಕ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಅಂಗಾರ, ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ಎಎಸ್‌ಪಿ ಲಖನ್ ಸಿಂಗ್, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್, ಜಿಲ್ಲಾ ಅಗ್ನಿಶಾಮಕದಳದ ಎಸ್‌ಪಿ ಭರತ್ ಕುಮಾರ್, ಕೆಎಸ್‌ಆರ್‌ಟಿಸಿ ಡಿಸಿ ಅರುಣ್ ಎನ್.ಎಸ್., ಎಡಬ್ಯ್ಲೂಇ ಸನ್ನೇಗೌಡ, ಠಾಣಾಧಿಕಾರಿ ಓಮನ, ಕಡಬ ತಹಶೀಲ್ದಾರ್ ಅನಂತಶಂಕರ, ಪುತ್ತೂರು ಇಒ ನವೀನ್ ಭಂಡಾರಿ, ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್‌ರಾಮ್ ಸುಳ್ಳಿ, ವನಜಾ ವಿ.ಭಟ್, ಎಬಿ ಮನೋಹರ್ ರೈ, ಪಿ.ಜಿ.ಎಸ್.ಎನ್.ಪ್ರಸಾದ್, ಪ್ರಸನ್ನ ದರ್ಬೆ, ಇಒ ರವೀಂದ್ರ ಎಂ.ಎಚ್., ಎಇಒ ಪುಷ್ಪಲತಾ, ಸೇರಿದಂತೆ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments