Monday, September 26, 2022
Homeಕರಾವಳಿಕೆಕೆಆರ್ ವಿರುದ್ಧಆರ್​ಸಿಬಿ ಗೆ 8 ವಿಕೆಟ್​ಗಳ ಭರ್ಜರಿ ಜಯ

ಕೆಕೆಆರ್ ವಿರುದ್ಧಆರ್​ಸಿಬಿ ಗೆ 8 ವಿಕೆಟ್​ಗಳ ಭರ್ಜರಿ ಜಯ

- Advertisement -
Renault

Renault

Renault

Renault






- Advertisement -

ಅಬುಧಾಬಿ : ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಅಮೋಘ ಗೆಲುವು ಕಂಡಿದೆ. ಆರ್​ಸಿಬಿ ಬೌಲರ್​ಗಳ ಬೆಂಕಿಯ ಚೆಂಡಿಗೆ ನಲುಗಿದ ಕೆಕೆಆರ್ ಸೋಲುಂಡರೆ ಆರ್​ಸಿಬಿ 8 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ಕೆಕೆಆರ್ ನೀಡಿದ್ದ 85 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಆರ್​ಸಿಬಿ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಆ್ಯರೋನ್ ಫಿಂಚ್ ಮೊದಲ ವಿಕೆಟ್​ಗೆ 46 ರನ್​ಗಳ ಕಾಣಿಕೆ ನೀಡಿದರು. ಆದರೆ, ಫಿಂಚ್ 16 ರನ್ ಗಳಿಸಿದ್ದಾಗ ಔಟ್ ಆದರೆ, ಪಡಿಕ್ಕಲ್ 17 ಎಸೆತಗಳಲ್ಲಿ 25 ರನ್ ಬಾರಿಸಿ ನಿರ್ಗಮಿಸಿದರು.

ಬಳಿಕ ಒಂದಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಗುರುಕೀರತ್ ಮನ್​ಸಿಂಗ್ 13.3 ಓವರ್​ನಲ್ಲೇ 85 ರನ್ ಬಾರಿಸಿ ತಂಡಕ್ಕೆ ಗೆಲುವು ತಂದಿಟ್ಟರು. ಕೊಹ್ಲಿ ಅಜೇಯ 18 ಹಾಗೂ ಗುರುಕೀರತ್ ಅಜೇಯ 21 ರನ್ ಗಳಿಸಿದರು. ಕೆಕೆಆರ್ ಪರ ಲಾಕಿ ಫರ್ಗೂಸನ್ 1 ವಿಕೆಟ್ ಪಡೆದರು.ಈ ಗೆಲುವಿನೊಂದಿಗೆ ಆರ್​ಸಿಬಿ ಆಡಿದ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ, ಇನ್ನುಳಿದ ಮೂರರಲ್ಲಿ ಸೋಲು ಅನುಭವಿಸಿದೆ. ಒಟ್ಟು 14 ಅಂಕಗಳೊಂದಿಗೆ ಐಪಿಎಲ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ 2ನೇ ಸ್ಥಾನಕ್ಕೇರಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಕೋಲ್ಕತ್ತಾ ಕೇವಲ 14 ರನ್​ಗೆ 4 ವಿಕೆಟ್ ಕಳೆದುಕೊಂಡಿತು. ಶುಭ್ಮನ್ ಗಿಲ್ ಜೊತೆ ಓಪನರ್ ಆಗಿ ಕಣಕ್ಕಿಳಿದ ರಾಹುಲ್ ತ್ರಿಪಾಠಿ ಕೇವಲ 1 ರನ್​ ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಔಟ್ ಆದರು. ಮುಂದಿನ ಎಸೆತದಲ್ಲೇ ನಿತೀಶ್ ರಾಣಾ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments