ಬೆಂಗಳೂರು, (ಜ.22): ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಂಎಲ್ಸಿ ನಾರಾಯಣಸ್ವಾಮಿ ಮತ್ತು ಕಾಂಗ್ರೆಸ್ ಯುವ ನಾಯಕ ಮನೋಹರ್ ನಡುವೆ ಗಲಾಟೆ ನಡೆದಿದ್ದು, ಉಭಯ ನಾಯಕರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.
ಕಾಂಗ್ರೆಸ್ ಎಂಎಲ್ಸಿ ನಾರಾಯಣಸ್ವಾಮಿ ಹಾಗೂ ರಾಜಾಜಿನಗರ ಕಾಂಗ್ರೆಸ್ ಯುವ ನಾಯಕ ಮೋನಹರ್ ನಡುವೆ ಇಂದು (ಶುಕ್ರವಾರ) ಮಧ್ಯಾಹ್ನ ಡಿಶುಂ ಡಿಶುಂ ಆಗಿದೆ. ಕಾರ್ಯಾಧ್ಯಕ್ಷರುಗಳ ಸಮ್ಮುಖದಲ್ಲಿಯೇ ಈ ಗಲಾಟೆ ನಡೆದಿದೆ.
20 ನಿಮಿಷ ಕಾಲ ಮೇಲ್ಮನೆ ‘ರಣಾಂಗಣ’: ಕಂಡು ಕೇಳರಿಯದ ರೀತಿ ಸದಸ್ಯರ ತಳ್ಳಾಟ!
ಹೊಡೆದಾಟದ ಬಳಿಕ ಕೆಪಿಸಿಸಿ ಸಿಬ್ಬಂದಿಗಳು ಇಬ್ಬರನ್ನೂ ಪ್ರತ್ಯೇಕ ರೂಮಿನಲ್ಲಿ ಕೂರಿಸಿ ಸಮಧಾನಪಡಿಸಿದ್ದಾರೆ. ಕೆಲ ಸಮಯದ ಬಳಿಕ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರು ಕೆಪಿಸಿಸಿ ಕಚೇರಿಯಿಂದ ಹೊರನಡೆದರು.
ಘಟನೆ ಬಗ್ಗೆ ಕಾರ್ಯಾಧ್ಯಕ್ಷ ಪ್ರತಿಕ್ರಿಯೆ.
ಇನ್ನು ಈ ಘಟನೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಯಾವುದೇ ಗಲಾಟೆ ನಡೆದಿಲ್ಲ. ಬೆಳಗ್ಗೆ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಅವರು ನಮ್ಮ ಸದಸ್ಯರನ್ನ ಸೆಳೆಯುವ ಕೆಲಸ ಮಾಡಿದ್ದರು. ಆ ವಿಚಾರವಾಗಿ ಜೋರುಜೋರು ಮಾತು ನಡೆಯಿತು. ಆದ್ರೆ, ಯಾರೂ ಯಾರ ಮೇಲೂ ಹಲ್ಲೆ ಮಾಡಿಲ್ಲ. ನಾವು ಬಾಗಿಲು ಹಾಕಿ ಪಕ್ಷದ ವಿಚಾರ ಚರ್ಚೆ ಮಾಡಿದ್ದೇವೆ. ಚರ್ಚೆಯನ್ನ ಹೊರತುಪಡಿಸಿ ಬೇರೆ ಏನು ಆಗಿಲ್ಲ ಎನ್ನುವ ಮೂಲಕ ಯಾವುದೇ ಗಲಾಟೆ ನಡೆದಿಲ್ಲ ಎನ್ನುವ ರೀತಿಯಲ್ಲಿ ಹೇಳಿದರು.