Thursday, March 23, 2023
Homeರಾಜಕೀಯಕೊರೊನಾ ಸಂಕಷ್ಟದ ನಡುವೆ ಪ್ರಧಾನಿಗೆ 8 ಸಾವಿರ ಕೋಟಿ ವೆಚ್ಚದಲ್ಲಿ ವಿಮಾನ ಖರೀದಿಯ ...

ಕೊರೊನಾ ಸಂಕಷ್ಟದ ನಡುವೆ ಪ್ರಧಾನಿಗೆ 8 ಸಾವಿರ ಕೋಟಿ ವೆಚ್ಚದಲ್ಲಿ ವಿಮಾನ ಖರೀದಿಯ ಆತುರವೇನು ?

- Advertisement -


Renault

Renault
Renault

- Advertisement -

ಮಂಗಳೂರು: ಕೊರೊನಾ ಸಂಕಷ್ಟದ ನಡುವೆ ಪ್ರಧಾನಿ ಮೋದಿಯವರು 8 ಸಾವಿರ ಕೋಟಿ ರೂ.ಯ ವಿಮಾನ ಖರೀದಿಸಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಈ ರೀತಿಯ ಖರೀದಿ ಎಷ್ಟು ಸಮಂಜಸ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾದಲ್ಲಿ ಬಳಲುತ್ತಿರುವ ಜನತೆಗೆ ಸಂತಾಪ ಹಾಗೂ ಅವರ ಆಸ್ಪತ್ರೆಗಳ ಖರ್ಚು-ವೆಚ್ಚಗಳನ್ನು‌ ಸರ್ಕಾರ ಭರಿಸಿ, ಸಾಂತ್ವನ ಹೇಳಬೇಕಾಗಿರುವ ಕಾರ್ಯ ಈಗ ಆಗಬೇಕಾಗಿದೆ ಎಂದು ಹೇಳಿದರು.

ವಿದ್ಯಾಗಮ‌ ಯೋಜನೆಯ ಮೂಲಕ ರಾಜ್ಯದ ಶಿಕ್ಷಕರು ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಪರಿಣಾಮ ಸಾಕಷ್ಟು ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿದೆ. ಕೆಲವರು ಸೋಂಕಿಗೆ ಬಲಿಯಾಗಿದ್ದಾರೆ‌.

ಮೂಡುಬಿದಿರೆಯ ಶಿಕ್ಷಕಿಗೂ ಇದೇ ರೀತಿ ಕೊರೊನಾ ಸೋಂಕು ತಗುಲಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ಅವರ ಪುತ್ರಿ ತಾಯಿಗೆ ಚಿಕಿತ್ಸೆ ಕೊಡಿಸುತ್ತಿರುವ ಸಂಕಷ್ಟದ ಬಗ್ಗೆ ಸಿಎಂ ಹಾಗೂ ಜನಪ್ರತಿನಿಧಿಗಳಲ್ಲಿ ಅಳಲು ತೋಡಿಕೊಂಡಿದ್ದರು. ತಕ್ಷಣ ಇದಕ್ಕೆ ಸಿಎಂ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಂದಿಸಿದ್ದು, ಅದಕ್ಕಾಗಿ ಅವರಿಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

- Advertisement -

LEAVE A REPLY

Please enter your comment!
Please enter your name here

spot_img

Most Popular

Recent Comments