Monday, October 2, 2023
Homeಕರಾವಳಿಗುರುಪುರದ ಕಂದಾವರದಲ್ಲಿ ವ್ಯಕ್ತಿ ಮೇಲೆ ತಲವಾರ್​​ನಿಂದ​ ದಾಳಿ

ಗುರುಪುರದ ಕಂದಾವರದಲ್ಲಿ ವ್ಯಕ್ತಿ ಮೇಲೆ ತಲವಾರ್​​ನಿಂದ​ ದಾಳಿ

- Advertisement -



Renault

Renault
Renault

- Advertisement -

ಮಂಗಳೂರು: ವ್ಯಕ್ತಿಯೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ತಲವಾರ್​ನಿಂದ​ ದಾಳಿ ನಡೆಸಿದ ಘಟನೆ ಮಂಗಳೂರು ಹೊರವಲಯದಲ್ಲಿನ ಗುರುಪುರದ ಕಂದಾವರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಅಬ್ದುಲ್ಲಾ ಎಂಬುವವರು ಕಳೆದ ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಹಿಂದಿನಿಂದ ಬಂದು ದಾಳಿ ಮಾಡಿದ್ದಾರೆ. ಓರ್ವ ಹೊಡೆದು ಓಡಿ ಹೋದರೆ ಮತ್ತೋರ್ವ ತಲವಾರ್​​​ನಿಂದ ದಾಳಿ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಅಬ್ದುಲ್ಲಾ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments