ಮಂಗಳೂರು : ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಅನೇಕ ವಿಧದಲ್ಲಿ ತಡೆ ತರಲಾಗುತ್ತಿದೆ. ಆದರೆ ಗೋಹತ್ಯೆ ನಿಷೇಧ ಕಾನೂನು ಕೂಡಲೇ ಜಾರಿಯಾಗಬೇಕಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭರತ ಭೂಮಿಯಲ್ಲಿ ಗೋವು ಪರಮ ಪೂಜನೀಯವಾಗಿದ್ದು, ಬದುಕಿಗೆ ಅತ್ಯಂತ ಸಮೀಪವಾಗಿವೆ. ಅಂತಹ ಗೋವುಗಳ ಸಂತತಿಯ ಉಳಿವಿಗೆ ಸರ್ಕಾರ ಕೂಡಲೇ ಬಲವಾಗಿರುವ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸುತ್ತೇನೆ ಎಂದರು.
ಲವ್ ಜಿಹಾದ್ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಇಂದು ಪುರುಷರಿಗಿಂತ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ವಂಚನೆಗೊಳಗಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ. ದೈಹಿಕ, ಆರ್ಥಿಕವಾಗಿ ಶೋಷಣೆಗೊಳಗಾಗುತ್ತಿದ್ದಾರೆ. ಆದ್ದರಿಂದ ಅನೇಕ ರಾಜ್ಯಗಳು ಕೈಗೊಂಡಿರುವ ಬಲವಾದ ಕಾನೂನಿನಂತೆ ನಮ್ಮ ರಾಜ್ಯವೂ ಕಾನೂನನ್ನು ರಚಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.