Sunday, May 28, 2023
Homeರಾಜಕೀಯಜೆಎನ್ ಯು ವಿವಿಗೆ ಸ್ವಾಮಿ ವಿವೇಕಾನಂದರ ಹೆಸರಿಡಿ : ಸಿಟಿ ರವಿ

ಜೆಎನ್ ಯು ವಿವಿಗೆ ಸ್ವಾಮಿ ವಿವೇಕಾನಂದರ ಹೆಸರಿಡಿ : ಸಿಟಿ ರವಿ

- Advertisement -


Renault

Renault
Renault

- Advertisement -

ಬೆಂಗಳೂರು: ಜವಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯದ ಹೆಸರನ್ನು ಮರು ನಾಮಕರಣ ಸ್ವಾಮಿ ವಿವೇಕಾನಂದ ಹೆಸರಿಡುವಂತೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ಈ ಬಗ್ಗೆ ಕುರಿತು ಟೀಟ್ ಮಾಡಿರುವ ರವಿ ಅವರು, ‘ಸ್ವಾಮಿ ವಿವೇಕಾನಂದ ಯೂನಿವರ್ಸಿಟಿ ಎಂದು ಜೆಎನ್‌ಯು ಮರುನಾಮಕರಣವಾಗಲಿ ಎಂಬ ಸಲಹೆಯನ್ನು ದೇಶದ ಜನರ ಮುಂದೆ ಇರಿಸಿದ್ದಾರೆ. ಭಾರತ ಎಂಬ ಪರಿಕಲ್ಪನೆಯ ಹಿಂದಿರುವ ಮಹಾಪುರುಷ ಸ್ವಾಮಿ ವಿವೇಕಾನಂದ, ಅವರ ತತ್ತ್ವಶಾಸ್ತ್ರ ಮತ್ತು ಮೌಲ್ಯಾದರ್ಶನಗಳೇ ಭಾರತದ ಬಲ, ಶಕ್ತಿ. ಹೀಗಾಗಿ ಜವಹರಲಾಲ್ ನೆಹರೂ ಯೂನಿವರ್ಸಿಟಿಯನ್ನು ಸ್ವಾಮಿ ವಿವೇಕಾನಂದ ಯೂನಿವರ್ಸಿಟಿ ಎಂದು ನಾಮಕರಣಮಾಡುವುದೇ ಸರಿಯಾದ ವಿಚಾರ. ರಾಷ್ಟ್ರಪ್ರೇಮಿ ಸಂತನ ಜೀವನ ತಲೆಮಾರುಗಳ ತನಕ ಪ್ರೇರಣೆ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಜೆಎನ್ ಯು ವಿವಿ ಆವರಣದಲ್ಲಿ ಸ್ಥಾಪನೆಯಾಗಿದ್ದ ವಿವೇಕಾನಂದ ಸ್ವಾಮಿ ವಿಗ್ರಹವನ್ನು ಲೋಕಾರ್ಪಣೆ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಸಿಟಿ ರವಿ ಅವರ ಈ ಟ್ವೀಟ್ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ರವಿ ಅವರ ಟ್ವೀಟ್ ಗೆ ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ, ಮನೋಜ್ ತಿವಾರಿ ಬೆಂಬಲ ಸೂಚಿಸಿದ್ದಾರೆ, ಅಂತೆಯೇ ಕೆಲವರು, ಕೇವಲ ಮರುನಾಮಕರಣದಿಂದ ಪ್ರಯೋಜನವಾಗುವುದಿಲ್ಲ. ಅಲ್ಲಿನ ಮೂಲ ವ್ಯವಸ್ಥೆಯನ್ನೇ ಪರಿಷ್ಕರಿಸಬೇಕು. ಆ ವಿಶ್ವ ವಿದ್ಯಾಲಯದ ಪುನರುತ್ಥಾನವಾಗಬೇಕು. ಪಠ್ಯದಿಂದ ಹಿಡಿದು ಪ್ರತಿಯೊಂದೂ ಬದಲಾಗಬೇಕು. ಇಲ್ಲದೇ ಇದ್ದರೆ ಮರುನಾಮಕರಣ ಮಾಡಿದರೂ ಅದು ಸಂತರಿಗೆ ಮಾಡಿದ ಅವಮಾನವಾದೀತು ಎಂದು ಕೆ.ಸೆಂಥಿಲ್ ಕುಮಾರ್ ಎಂಬುವರು ಪ್ರತಿಕ್ರಿಯಿಸಿದ್ದಾರೆ.

1969 ರಲ್ಲಿ ಸ್ಥಾಪಿಸಲಾಗಿದ್ದ ವಿವಿಗೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರನ್ನು ಇಡಲಾಗಿತ್ತು. ಈ ಹಿಂದೆ ರಾಜಕೀಯ ಪ್ರವಚನದ ರಂಗವಾಗಿದ್ದ ಮತ್ತು ಆಗಾಗ್ಗೆ ಪ್ರಗತಿಪರ ಮತ್ತು ಎಡಪಂಥೀಯ ರಾಜಕಾರಣಕ್ಕೆ ಧ್ವನಿ ನೀಡುತ್ತಿತ್ತು.

- Advertisement -

LEAVE A REPLY

Please enter your comment!
Please enter your name here

Most Popular

Recent Comments