ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ ರೋಟರಿ ಕ್ಲಬ್ ಮೂಲ್ಕಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು ಹಳೆಯಂಗಡಿ ಇವರ ಸಹಕಾರದೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಕ್ಕಳಿಗಾಗಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ತುಳುನಾಡ ತುತ್ತೈತ ಜೋಕುಲೆನ ಭಾವಚಿತ್ರ ಪಂಥ ದ ಸಮಾರೋಪ ಸಮಾರಂಭವನ್ನು ದಿನಾಂಕ: ೨೧.೧೧.೨೦೨೦ ರಂದು ಅಕಾಡೆಮಿ ಸಿರಿಚಾವಡಿಯಲ್ಲಿ ಆಯೋಜಿಸಲಾಗಿತ್ತು.
ಸಂಜೆ 3.30 ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ದಯಾನಂದ ಜಿ. ಕತ್ತಲ್‌ಸಾರ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ರೋಟರಿ ಜಿಲ್ಲೆಯ ಜಿಲ್ಲಾ ಗವರ್ನರ್ ರೊ.ರಂಗನಾಥ್ ಭಟ್, ರೋಟರಿ ಜಿಲ್ಲೆ ವಲಯ-1 ರ ಸಹಾಯಕ ಗವರ್ನರ್ ರೊ.ಬಾಲಕೃಷ್ಣ ಶೆಟ್ಟಿ ಕಳ್ಳಿಗೆ, ಲಯನ್ ಸೇಸಾನಿ ರೊ. ಎಮ್.ನಾರಾಯಣ್, ಮೂಲ್ಕಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೊ.ಅಶೋಕ್‌ಕುಮಾರ್ ಶೆಟ್ಟಿ , ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕಾರದ ಶ್ರೀ ಎಸ್.ಆರ್. ಬಂಡಿಮಾರ್, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ದೇವಾಡಿಗ ಅತಿಥಿಗಳಾಗಿ ಭಾಗವಹಿಸಿದರು. ಶ್ರೀಮತಿ ನೀಮಾ ಹಳೆಯಂಗಡಿ, ಅಕಾಡೆಮಿ ಸದಸ್ಯೆ ಶ್ರೀಮತಿ ವಿಜಯಲಕ್ಷ್ಮೀ ಪಿ.ರೈ, ಯಶೋಧರ ಕೋಟ್ಯಾನ್ ಮತ್ತು ಭಾಗ್ಯವಾನ್ ಸನಿಲ್ ಮುಲ್ಕಿ ಸ್ಪರ್ಧೆಯ ತೀರ್ಪಗಾರರಾಗಿ ಸಹಕರಿಸಿದರು
ವಿಜೇತರ ವಿವರ
ಪ್ರಥಮ : ಹಳೆಯಂಗಡಿ ತೋಕೂರಿನ ಶ್ರೀಮತಿ ರಶ್ಮಿತಾ ಮತ್ತು ಶ್ರೀ ಹಿiಕರ ರವರ ಪುತ್ರ ಲತೀಶ್ ಎಚ್. ಕುಮಾರ್
ದ್ವಿತೀಯ : ಮಂಗಳೂರು ಕುಳಾಯಿಯ ಶ್ರೀಮತಿ ದಿಶಾ ಶಿವಪ್ರಸಾದ್ ಮತ್ತು ಶ್ರೀ ಶಿವಪ್ರಸಾದ್ ರವರ ಪುತ್ರಿ ಯುಕ್ತಿ ಎಸ್. ಪ್ರಸಾದ್
ತೃತೀಯ : ಮಂಗಳೂರಿನ ಬಾಳ ಗ್ರಾಮದ ಶ್ರೀಮತಿ ರಜಿನಿ ಮತ್ತು ಶ್ರೀ ರಾಜೇಶ ರವರ ಪುತ್ರಿ ಜಶ್ವಿ ಆರ್.ಕುಲಾಲ್
ಅಧಿತ್ರಿ ಬೆಳುವಾಯಿ, ಮೋಕ್ಷಿತ ಪಿ.ಎನ್ ತೋಕೂರು, ಸಾಕ್ಷಿ ಉಡುಪಿ, ಕೆ.ಶೌರ್ಯ ವಿ.ಕಾಮತ್ ಉಡುಪಿ ಮತ್ತು ಈಶಾನ್ ಭಟ್ ಉಡುಪಿ ರವರಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು. ತೀರ್ಪುಗಾರರಾದ ಶ್ರೀಮತಿ ನೀಮಾ ಹಳೆಯಂಗಡಿ ಮತ್ತು ಯಶೋಧರ ಕೋಟ್ಯಾನ್ ರವರನ್ನು ಸನ್ಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ಹಿಗ್ರಾನ ಗ್ರಾಮದ ಶ್ರೀ ನುಜೂರು ಪೂವಪ್ಪ ಮತ್ತು ಶ್ರೀಮತಿ ಲೋಲಾಕ್ಷಿ ದಂಪತಿಯವರ ೭ ವರ್ಷದ ಬಾಲ ಗಾಯಕ ಮಾಸ್ಟರ್ ಕಾರ್ತಿಕ್ ರವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿವತಿಯಿಂದ ತುಳುವ ಕುರಲ್ ಎಂಬ ಬಿರುದು ಕೊಟ್ಟು ಸನ್ಮಾನಿಸಲಾಯಿತು. ಹಾಗೂ ಕಿರುತೆರ ಮತ್ತು ಸಿನೆಮಾಗಳಲ್ಲಿ ಪಾತ್ರ ಮಾಡಿರುವ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಮಾಸ್ಟರ್ ಅಚಿಂತ್ಯ ರವರನ್ನೂ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಅಕಾಡೆಮಿ ಸದಸ್ಯರುಗಳಾದ ಶ್ರೀ ನಿಟ್ಟೆ ಶಶಿಧರ ಶೆಟ್ಟಿ, ಶ್ರೀ ಲೀಲಾಕ್ಷ ಕರ್ಕೇರ, ಶ್ರೀ ಕಡಬ ದಿನೇಶ್ ರೈ, ಶ್ರೀ ಸಂತೋಷ್ ಪೂಜಾರಿ, ಶ್ರೀ ಚೇತಕ್ ಪೂಜಾರಿ ಉಪಸ್ಥಿತರಿದ್ದರು. ಕಾರ್‍ಯಕ್ರಮದ ಸದಸ್ಯ ಸಂಚಾಲಕ ಹಾಗೂ ಅಕಾಡೆಮಿಯ ಸದಸ್ಯರಾದ ಶ್ರೀ ನರೇಂದ್ರ ಕೆರೆಕಾಡು ಕಾರ್‍ಯಕ್ರಮವನ್ನು ನಿರೂಪಿಸಿದರು.