Sunday, May 28, 2023
Homeಕರಾವಳಿದೇಶದಲ್ಲಿ 13 ಸಾವಿರ ರೈತರಿಗೆ ಪ್ರಾಯೋಗಿಕವಾಗಿ ನ್ಯಾನೋ ಫರ್ಟಿಲೈಸರ್ ವಿತರಣೆ : ಡಿ.ವಿ.ಸದಾನಂದಗೌಡ

ದೇಶದಲ್ಲಿ 13 ಸಾವಿರ ರೈತರಿಗೆ ಪ್ರಾಯೋಗಿಕವಾಗಿ ನ್ಯಾನೋ ಫರ್ಟಿಲೈಸರ್ ವಿತರಣೆ : ಡಿ.ವಿ.ಸದಾನಂದಗೌಡ

- Advertisement -


Renault

Renault
Renault

- Advertisement -

ಬಂಟ್ವಾಳ : ಕೊರೊನಾ ವೇಳೆ ಸಕ್ರಿಯವಾಗಿದ್ದ ಕೃಷಿ ಕ್ಷೇತ್ರಕ್ಕೆ ರಸಗೊಬ್ಬರ ಎಂದಿಗಿಂತ ಶೇ. 36.2 ಜಾಸ್ತಿ ಮಾರಾಟವಾಗಿದ್ದು, ನೇರವಾಗಿ ರೈತರ ಅಕೌಂಟ್​ಗೆ ಸಹಾಯಧನವನ್ನೂ ಪಾವತಿಸಲಾಗಿದೆ. ಇದರಲ್ಲಿ ಇಪ್ಕೋ ಪಾತ್ರ ಪ್ರಧಾನವಾದದ್ದು. ಇನ್ನು ನ್ಯಾನೋ ರಸಗೊಬ್ಬರ ವಿತರಣೆ ಆರಂಭವಾದರೆ ದೇಶದ ಕೃಷಿ ಉತ್ಪಾದನೆಯೂ ಜಾಸ್ತಿಯಾಗಬಹುದು ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್ ಲಿ. ಬೆಂಗಳೂರು, ಸದಾಸ್ಮಿತ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​​ಅನ್ನು ಶನಿವಾರ ಸಂಜೆ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಅವರು ಮಾತನಾಡಿದರು. ಇಪ್ಕೋ ಸಂಸ್ಥೆಯಿಂದ ಸಾವಯವ ಹಾಗೂ ನ್ಯಾನೋ ಫರ್ಟಿಲೈಸರ್ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಿದ್ದು, ದೇಶದಲ್ಲಿ 13 ಸಾವಿರ ರೈತರಿಗೆ ಪ್ರಾಯೋಗಿಕವಾಗಿ ನ್ಯಾನೋ ಫರ್ಟಿಲೈಸರ್ ವಿತರಿಸಲಾಗಿದೆ. ಇದರಿಂದ ಶೇ. 18ರಷ್ಟು ಉತ್ಪಾದನೆ ಹೆಚ್ಚಾಗಿ, ಶೆ. 20ರಷ್ಟು ಉತ್ಪಾದನಾ ವೆಚ್ಚ ಕಡಿಮೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಕಲಿಕೆಯ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿ, ವಿದ್ಯಾರ್ಜನೆಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದರು.

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಇಪ್ಕೋ ನಿರ್ದೇಶಕರಾದ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಲ್ಯಾಪ್​ಟಾಪ್ ಪಡೆದುಕೊಂಡ ವಿದ್ಯಾರ್ಥಿಗಳು ಮುಂದೆ ಇನ್ನಷ್ಟು ವಿದ್ಯಾರ್ಥಿಗಳಿಗೆ ನೆರವಾಗುವಂತಾಗಬೇಕು ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಿ ವಿದ್ಯಾರ್ಥಿಗಳ ಶಿಕ್ಷಣದಲ್ಲೂ ಬದಲಾವಣೆಯಾಗಿದೆ ಎಂದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments