ಮಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನಾ ಸಂದರ್ಭದಲ್ಲಿ ಜನಮಂಗಲ ಕಾರ್ಯಗಳಲ್ಲೊಂದಾದ ಪುರಾತನ ದೇವಾಲಯಗಳಿಗೆ ಕಾಯಕಲ್ಪ ನೀಡುವ ಯೋಜನೆಯನ್ನು ಸಂಕಲ್ಪಿಸಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ನ್ನು ಪ್ರಾರಂಭಿಸಿದರು.
ಊರ-ಪರವೂರ ಜನರು ಪೂಜ್ಯರನ್ನು ಕ್ಷೇತ್ರದಲ್ಲಿ ಭೇಟಿ ಮಾಡಿ ತಮ್ಮ ಶಿಥಿಲವಾಗಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡಲು ಮನವಿ ಮಾಡಿಕೊಳ್ಳುತ್ತಿದ್ದುದ್ದನ್ನು ಮನಗಂಡ ಪೂಜ್ಯರು ಹೇರಳ ಹಣ ವೆಚ್ಚ ಮಾಡಿ ಹೊಸ ದೇವಸ್ಥಾನಗಳ ನಿರ್ಮಾಣಕ್ಕಿಂತ ಐತಿಹಾಸಿಕ ಹಿನ್ನೆಲೆಯ ಪುರಾತನ ಸ್ಮಾರಕಗಳ ರಕ್ಷಣೆಯ ಕಾರ್ಯ ಹೆಚ್ಚು ಮಹತ್ವಪೂರ್ಣವಾದದ್ದು ಎಂಬ ಆಶಯದೊಂದಿಗೆ ಈ ಟ್ರಸ್ಟ್‌ನ್ನು ಹುಟ್ಟು ಹಾಕಿದರು. ರಾಜ್ಯದ ೨೫ ಜಿಲ್ಲೆಗಳಲ್ಲಿ ಈವರೆಗೆ ಒಟ್ಟು ೨೫೩ ಸ್ಮಾರಕಗಳು ಈ ಟ್ರಸ್ಟಿನಿಂದ ಜೀರ್ಣೋದ್ಧಾರವಾಗಿದೆ. ಟಸ್ಟ್‌ನ ಸಂರಕ್ಷಣಾ ಕಾರ್ಯದ ಗುಣಮಟ್ಟ ಮತ್ತು ಪ್ರಗತಿಯನ್ನು ಗಮನಿಸಿದ ಕರ್ನಾಟಕ ಸರ್ಕಾರವು ಈ ಟ್ರಸ್ಟ್‌ನ್ನು “ಐತಿಹಾಸಿಕ ಹಿನ್ನೆಲೆಯ ಪುರಾತನ ಸ್ಮಾರಕಗಳ ಸಂರಕ್ಷಣಾ ಕಾರ್ಯದಲ್ಲಿ ಸರ್ಕಾರದ ಸಹಭಾಗಿತ್ವದ ಸಂಸ್ಥೆ” ಯೆಂದು ಗುರುತಿಸಿ, ವಾರ್ಷಿಕ ಕ್ರಿಯಾಯೋಜನೆಯಡಿಯಲ್ಲಿ ಅನುದಾನವನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಐತಿಹಾಸಿಕ ಹಿನ್ನೆಲೆಯ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ಸರ್ಕಾರ ಮತ್ತು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಿರ್ವಹಿಸುತ್ತಿರುವ ದೇಶದ ಏಕೈಕ ಸಂಸ್ಥೆಯಾಗಿದೆ. ಪೂಜ್ಯ ಹೆಗ್ಗಡೆಯವರ ಈ ಘನ ಕಾರ್ಯವನ್ನು ಸರ್ಕಾರವು ಗುರುತಿಸಿ, ಗೌರವಿಸಿದುದರಿಂದಾಗಿ ಇಂದು ರಾಜ್ಯದುದ್ದಗಲಕ್ಕೂ ಶಿಥಿಲಗೊಳ್ಳುತ್ತಿರುವ ಅನೇಕ ಪುರಾತನ ದೇವಾಲಯಗಳು ಈ ಟ್ರಸ್ಟ್ ವತಿಯಿಂದ ತನ್ನ ಮೂಲ ಸ್ವರೂಪವನ್ನು ಮರು ಪಡೆಯುವಂತಾಯಿತು.
ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಮತ್ತು ಶ್ರೀ ಡಿ. ಹರ್ಷೇಂದ್ರ ಕುಮಾರ್‌ರವರು ಈ ಟ್ರಸ್ಟಿನ ವಿಶ್ವಸ್ಥ ಮಂಡಳಿಯಲ್ಲಿದ್ದು, ಈ ಕಾರ್ಯಕ್ಕೆ ನಿರ್ದೇಶನ ನೀಡುತ್ತಿದ್ದಾರೆ. ಶ್ರೀ ಡಿ. ಸುರೇಂದ್ರ ಕುಮಾರ್‌ರವರು ಇದರ ಸಲಹಾ ಸಮಿತಿಯಲ್ಲಿದ್ದು ಬೆಂಗಳೂರಿನಲ್ಲಿರುವ ಅವರ ಕಚೇರಿಯಲ್ಲಿ ಇದರ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ. ಜೀರ್ಣೋದ್ಧಾರ ಕಾರ್ಯವು ಸಂಪ್ರದಾಯಬದ್ಧವಾಗಿ ನೆರವೇರಲು ಸಲಹಾ ಸಮಿತಿಯನ್ನು ಹೊಂದಿದೆ. ಈ ಸಲಹಾ ಸಮಿತಿಯಲ್ಲಿ ಪುರಾತತ್ವ ಶಾಸ್ತ್ರ, ಶಿಲ್ಪಶಾಸ್ತ್ರ, ಕಲೆ, ಕಾನೂನು ಇತಿಹಾಸ, ಧರ್ಮ ಕ್ಷೇತ್ರಗಳಲ್ಲಿ ಅಪಾರ ಜ್ಞಾನ, ಅನುಭವ ಹೊಂದಿರುವ ತಂತ್ರಜ್ಞರನ್ನು ಹೊಂದಿದೆ.
ಹಿಂದಿನ ನಿರ್ದೇಶಕರಾದ ಶ್ರೀ ಎ. ಹೆಚ್. ಹರಿರಾಮ ಶೆಟ್ಟಿಯವರು ಈ ಟ್ರಸ್ಟಿಗೆ ಉತ್ತಮ ಸೇವೆ ನೀಡಿದ್ದಾರೆ. ಪ್ರಸ್ತುತ ಶ್ರೀ ನೇಮಿರಾಜ ಜೈನ್‌ರವರು ನಿರ್ದೇಶಕರಾಗಿ, ಶ್ರೀ ಎ. ವೀರು ಶೆಟ್ಟಿಯವರು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಸ್ಟಿನ ಕಾರ್ಯವನ್ನು ಅವಲೋಕಿಸಿರುವ ಕರ್ನಾಟಕ ಸರ್ಕಾರವು ಈ ಬಾರಿಯ (2020ರ) ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿರುವುದು ಪ್ರಸ್ತುತವಾಗಿದೆ.
ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
- Advertisement -
Recent Comments
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ : ಮಾಜಿ ಸಚಿವ ಯು.ಟಿ ಖಾದರ್
on
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ : ಮಾಜಿ ಸಚಿವ ಯು.ಟಿ ಖಾದರ್
on
ಮಂಗಳೂರಿನಲ್ಲೊಬ್ಬ ಸೋನು ಸೂದ್ : ಪನಾಮ ಕಾರ್ಪೋರೇಷನ್ ಲಿಮಿಟೆಡ್ ನ ಚೇರ್ಮನ್ ಮತ್ತು ಸಿ. ಇ. ಒ ವಿವೇಕ್ ರಾಜ್ ಪೂಜಾರಿ
on
ದೇಶವಿದೇಶಗಳಲ್ಲಿ ವೈರಲ್ ಆಗುತ್ತಿದೆ ಈ ವೀಡಿಯೋ : ಅಂಬಾನಿ ತನ್ನ ಘನತೆಗಾಗಿ ದೇಶದ ಘನತೆಯನ್ನು ಕುಗ್ಗಿಸುತ್ತಿದ್ದಾರೋ…!
on