Saturday, September 30, 2023
Homeಕರಾವಳಿಧರ್ಮಸ್ಥಳ ಲಕ್ಷದೀಪೋತ್ಸವ

ಧರ್ಮಸ್ಥಳ ಲಕ್ಷದೀಪೋತ್ಸವ

- Advertisement -Renault

Renault
Renault

- Advertisement -


ಉಜಿರೆ: ಧರ್ಮಸ್ಥಳದಲ್ಲಿ ಸೋಮವಾರ ರಾತ್ರಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನಡೆಯಿತು.

ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ಉತ್ಸವವನ್ನು ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.
ಶಂಖ, ಜಾಗಟೆ, ಕೊಂಬು, ಕಹಳೆ, ವೀರಗಾಸೆ ಮೊದಲಾದ ಸಹಸ್ರಾರುಜಾನಪದ ಕಲಾವಿದರು ಕಲಾಸೇವೆಯನ್ನು ಅರ್ಪಿಸಿದರು.

ಬೆಂಗಳೂರಿನ ಭಕ್ತರು ಸ್ವಯಂ ಸೇವಕರಾಗಿ ರಾತ್ರಿ ಅನ್ನದಾನದ ವ್ಯವಸ್ಥೆ ಮಾಡಿದರು.
ಡಿ. 10 ರಿಂದ 14ರ ವರೆಗೆ ಲಕ್ಷದೀಪೋತ್ಸವದ ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ, ಸರಳವಾಗಿ ನಡೆದವು.

ಕೊರೊನಾ ಬಗ್ಯೆ ಸರ್ಕಾರದ ಮಾರ್ಗದರ್ಶಿ ನಿಯಮಗಳನ್ನು ಎಲ್ಲಾ ಕಡೆ ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಎಲ್ಲಾ ಕಾರ್ಯಕ್ರಮಗಳನ್ನು ಸರಳವಾಗಿ ಆಯೋಜಿಸಿದ್ದು, ಸೀಮಿತ ಸಂಖ್ಯೆಯಲ್ಲಿ ಜನರು ಪ್ರತ್ಯಕ್ಷವಾಗಿ ಭಾಗವಹಿಸಿದ್ದರೂ, ಲಕ್ಷಾಂತರ ಮಂದಿ ಮನೆಯಲ್ಲೆ ಕುಳಿತು ಯುಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments