Saturday, September 30, 2023
Homeಕರಾವಳಿನವ ದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾಕ್ಕೆ ಚಾಲನೆ

ನವ ದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾಕ್ಕೆ ಚಾಲನೆ

- Advertisement -Renault

Renault
Renault

- Advertisement -

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವ ದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಉತ್ಸವಕ್ಕೆ ಶನಿವಾರಡಾ.ಆರತಿಕೃಷ್ಣ ದೀಪ ಬೆಳಗಿಸಿ ಚಾಲನೆ ನೀಡಿದರು.

ಕುದ್ರೋಳಿಯಲ್ಲಿ ಶಿಸ್ತುಬದ್ಧ ರೀತಿ ಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನವರಾತ್ರಿ ಉತ್ಸವವನ್ನು ಜನಾರ್ದನ ಪೂಜಾರಿಯವರಂತಹ ಹಿರಿಯ ಮಾರ್ಗ ದರ್ಶನದಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಕುದ್ರೋಳಿ ದೇವಸ್ಥಾನದಲ್ಲಿ ಮಹಿಳೆಯರಿಗೆ, ವಿಧವೆಯರಿಗೆ ಮಹತ್ವದ ಸ್ಥಾನ ನೀಡಿರುವ ಕ್ರಾಂತಿಕಾರಿ ನಿರ್ಧಾರಗಳಿಂದ ದೇಶ ವಿದೇಶದಲ್ಲೂ ಖ್ಯಾತಿ ಪಡೆದಿದೆ. ದಸರಾ ನಾಡಿನ ಎಲ್ಲಾ ಜನತೆಗೆ ಮತ್ತೆ ಆರ್ಥಿಕ ಸುಖ ಸಮೃದ್ಧಿಯನ್ನು ನೀಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಪದ್ಮರಾಜ್, ವಿಧಾನ ಪರಿಷತ್ ಸದಸ್ಯ ಹರೀಶ್‌ಕುಮಾರ್, ಕಿಯೋನಿಸ್ಕ್ ಆಡಳಿತ ನಿರ್ದೇಶದ ಹರಿಕೃಷ್ಣ ಬಂಟ್ವಾಳ್, ಮನಪಾ ಸದಸ್ಯ ಅನಿಲ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments