Friday, May 14, 2021
Homeಕರಾವಳಿನಾಟಕಪರ್ಬ ತುಳು ರಂಗಭೂಮಿಗೆ ಆಶಾಕಿರಣ - ತೋನ್ಸೆ ವಿಜಯಕುಮಾರ್ ಶೆಟ್ಟಿ

ನಾಟಕಪರ್ಬ ತುಳು ರಂಗಭೂಮಿಗೆ ಆಶಾಕಿರಣ – ತೋನ್ಸೆ ವಿಜಯಕುಮಾರ್ ಶೆಟ್ಟಿ

- Advertisement -
Rental
Rental
- Advertisement -Home Plus
- Advertisement -
Platform
Maya Builders


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದೆರ್ ಕುಡ್ಲ ,ತುಳುವ ಬೊಳ್ಳಿ ಪ್ರತಿಷ್ಠಾನ ಮತ್ತು ನಮ್ಮ ಟಿವಿ ಸಹಯೋಗದೊಂದಿಗೆ ”ನಾಟಕ ಪರ್ಬ” ಇದರ ಮೂರನೇ ದಿನದ ಉದ್ಘಾಟನೆಯು ತುಳುಭವನದ ಸಿರಿಚಾವಡಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಮಾಧವ ಜೆಪ್ಪುಪಟ್ನ ಅವರಿಗೆ ಸಂಸ್ಮರಣ ಕಾರ್ಯಕ್ರಮ ನಡೆಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ನಡೆಯುವ ಏಳು ದಿನಗಳ ನಾಟಕ ಪರ್ಬವನ್ನು ಉದ್ಘಾಟಿಸಿ, ಮಾತನಾಡಿದ ಮುಂಬಯಿ ‘ಕಲಾಜಗತ್ತು’ದ ಸ್ಥಾಪಕಾಧ್ಯಕ್ಷರಾದ ತೋನ್ಸೆ ವಿಜಯಕುಮಾರ್ ಶೆಟ್ಟಿ ”೪೦ ವರ್ಷದ ತನ್ನ ಕಲಾಜೀವನವನ್ನು ಸ್ಮರಿಸುತ್ತ ಅಗಲಿದ ಶಿವಾನಂದ ಕರ್ಕೇರರನ್ನು ನೆನಪಿಸುತ್ತಾ, ಕರ್ನಾಟಕ ತುಳು ಸಹಿತ್ಯ ಅಕಾಡೆಮಿ ಮಾಡುತ್ತಿರುವ ಎಲ್ಲಾ ಕಾರ್‍ಯಕ್ರಮಗಳು ಮುಂದಿನ ದಿನಗಳಲ್ಲಿ ಕಲಾ ಲೋಕಕ್ಕೆ ದೊಡ್ಡ ಕೊಡುಗೆಯಾಗಲಿದೆ ‘ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್‌ಸಾರ್ ಅವರು ”ಕಲಾವಿದರೊಳಗೆ ತಾರತಮ್ಯ ಇರಬಾರದು.ಎಲ್ಲರೂ ಒಂದಾಗಿ ಬಾಳಿದರೆ ಮಾತ್ರ ರಂಗಭೂಮಿ ಬೆಳೆಯಲು ಸಾಧ್ಯ ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ತುಳುರಂಗಭೂಮಿ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಬೈಲ್ ಮಾತನಾಡಿ ,ನಮ್ಮನ್ನು ಅಗಲಿದ ಹಿರಿಯ ನಾಟಕಕಾರ ಶಿವಾನಂದ ಕರ್ಕೇರ ಹಾಗೂ ಹಿರಿಯ ರಂಗಕರ್ಮಿ ಮಾಧವ ಜಪ್ಪುಪಟ್ನ ಅವರ ವ್ಯಕ್ತಿತ್ವ, ಸಾಧನೆಯ, ಪ್ರಶಂಸೆಯ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಹಿರಿಯ ರಂಗಕರ್ಮಿ, ಕಲಾನಿರ್ದೇಶಕರಾದ ತಮ್ಮ ಲಕ್ಷ್ಮಣರವರು ಮಾತನಾಡುತ್ತಾ ನಮ್ಮನ್ನು ಅಗಲಿದ ಹಿರಿಯ ರಂಗಕರ್ಮಿ ಮಾಧವ ಜಪ್ಪುಪಟ್ನರ ”ಕಲಾ ಜೀವನದ ಪಯಣದ ದಿನಗಳನ್ನು ಸಂಸ್ಮರಿಸುತ್ತಾ, ‘ಬಂಗಾರ್ ಪಟ್ಲೇರ್’ ತುಳು ಸಿನಿಮಾದ ಡಬ್ಬಿಂಗ್ ಸಂದರ್ಭದಲ್ಲಿ ನಡೆದ ಘಟನೆಯನ್ನು ಸ್ಮರಿಸುತ್ತಾ ಕೇವಲ ರಂಗನಟನಾಗಿರದೆ , ಸಾಮಾಜಿಕವಾಗಿಯೂ ಸೇವೆಯನ್ನು ಸಲ್ಲಿಸಿದವರು” ಎಂದು ನುಡಿನಮನ ಸಲ್ಲಿಸಿದರು.
ಪತ್ರಕರ್ತ ಮಂದಾರ ರಾಜೇಶ್ ಭಟ್ ಮಾತನಾಡಿ ”ಕೊರೋನ ಸಂದರ್ಭದಲ್ಲಿ ದೃಶ್ಯಮಾಧ್ಯಮದ ಮೂಲಕ ರಂಗಭೂಮಿಯ ಪ್ರದರ್ಶನಕ್ಕೆ ಚಾಲನೆ ನೀಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು.

ಉದ್ಯಮಿ ಮತ್ತು ಕಲಾ ಪೋಷಕರಾದ ಹರೀಶ್ ಕುಮಾರ್, ಸಿಂಧೂರ ಕಲಾವಿದೆರ್ ಕಾರ್ಲ ಇದರ ಹಿರಿಯ ಕಲಾವಿದರಾದ ರವೀಂದ್ರ ಶಾಂತಿ ಪುಲ್ಕೇರಿ, ಎಸ್.ಸಿ.ಯುವಮೋರ್ಚಾದ ಕಾರ್‍ಯದರ್ಶಿ,ಕಲಾವಿದ ಮುಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯರಾದ ಚೇತಕ್ ಪೂಜಾರಿ ಭಾಗವಹಿಸಿದ್ದರು.
ಅಕಾಡೆಮಿಯ ಸದಸ್ಯರಾದ ಯಕ್ಷಬೊಳ್ಳಿ ಕಡಬ ದಿನೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಿಂಧೂರ ಕಲಾವಿದೆರ್ ಕಾರ್ಲ ಇವರಿಂದ ”ಆರ್ ಏರ್” ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಿತು.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments