- Advertisement -
ಮಂಗಳೂರು: ಪರ್ಷಿಯನ್ ಬೋಟ್ ಮುಳುಗಡೆಯಾಗಿದ್ದು 6 ಮಂದಿ ಮೀನುಗಾರರು ಉಳ್ಳಾಲದ ಪಶ್ಚಿಮ ಭಾಗದಿಂದ ಕಣ್ಮರೆಯಾಗಿದ್ದಾರೆ.
ಸುರಕ್ಷಾ ಹೆಸರಿನ ಬೋಟ್ ಮುಳುಗಡೆಯಾಗಿದೆ. ಇದರಲ್ಲಿ 20ಕ್ಕೂ ಅಧಿಕ ಮಂದಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸಿ ಮೀನುಗಳನ್ನು ಬೋಟ್‌ಗೆ ತುಂಬಿಸುವ ವೇಳೆ ಬೋಟ್‌ನೊಳಗೆ ನೀರು ನುಗ್ಗಿ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ನಾಪತ್ತೆಯಾದ ಮೀನುಗಾರರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ