ಮಂಗಳೂರು : ಪರ್ಸಿನ್ ಬೃಹತ್ ಬೋಟೊಂದು ಸಮುದ್ರದಲ್ಲಿ 15 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿ ನಾಪತ್ತೆಯಾದ ಆರು ಮಂದಿ ಮೀನುಗಾರರ ಪೈಕಿ ಐವರ ಮೃತದೇಹ ಈಗಾಗಲೇ ಪತ್ತೆಯಾಗಿದ್ದು, ಇನ್ನೊಬ್ಬರ ಪತ್ತೆಗಾಗಿ ಶೋಧ ಕಾರ್ಯಚರಣೆ ಮುಂದುವರೆದಿದೆ.
ಗುರುವಾರ ತಡರಾತ್ರಿಯವರೆಗೆ ಶೋಧ ಕಾರ್ಯಾಚರಣೆ ನಡೆಸಿದ್ದರೂ ಬೆಂಗ್ರೆಯ ಅನ್ಸಾರ್ (31) ಪತ್ತೆಯಾಗಿಲ್ಲ. ಕರಾವಳಿ ಭದ್ರತಾ ಪೊಲೀಸ್ ಪಡೆ, ಕೋಸ್ಟ್ ಗಾರ್ಡ್ ಮತ್ತು ದೋಣಿಗಳ ತಂಡಗಳು ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇನ್ನು ದೋಣಿಯನ್ನು ನೀರಿನಿಂದ ಮೇಲಕ್ಕೆತ್ತಲು ಸೋಮೇಶ್ವರದಲ್ಲಿ ಕೆಲಸ ಮಾಡುತ್ತಿರುವ ಬಾರ್ಜ್ ಅನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕೇಳಿದ್ದರು, ಆದರೆ ಈ ಬಾರ್ಜ್‌ಗೆ 15 ಟನ್‌ಗಳಷ್ಟು ತೂಕವಿರುವ ವಸ್ತುಗಳನ್ನು ಮಾತ್ರ ಎತ್ತುವ ಸಾಮರ್ಥ್ಯವಿದ್ದು, ಮುಳುಗಿದ ದೋಣಿಯನ್ನು ಎತ್ತುವುದಕ್ಕೆ ಅದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.