Monday, October 2, 2023
Homeಕರಾವಳಿಪಿಲಿಕುಳ ನಿಸರ್ಗಧಾಮಕ್ಕೆ ಚತುಷ್ಪಥ ರಸ್ತೆಗಳ ಕಾಮಗಾರಿಗಳಿಗೆ ಚಾಲನೆ

ಪಿಲಿಕುಳ ನಿಸರ್ಗಧಾಮಕ್ಕೆ ಚತುಷ್ಪಥ ರಸ್ತೆಗಳ ಕಾಮಗಾರಿಗಳಿಗೆ ಚಾಲನೆ

- Advertisement -



Renault

Renault
Renault

- Advertisement -

ಮಂಗಳೂರು : ಮೂಡುಶೆಡ್ಡೆ ಗ್ರಾಮ ಪಂಚಾಯತ್, ಡಾ|ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇವರ ಸಹಯೋಗದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಯೋಜನೆಯಡಿಯಲ್ಲಿನ ಪಿಲಿಕುಳ ನಿಸರ್ಗಧಾಮದ ಹೊರಾಂಗಣ ರಸ್ತೆ ಡಾಮರೀಕರಣ ಕಾಮಗಾರಿ ಹಾಗೂ ಡಾ|ಶಿವರಾಮ ಕಾರಂತರ ಪಿಲಿಕುಳ ನಿಸರ್ಗಧಾಮದ ಮುಂದುವರಿದ ಪಿಲಿಕುಳ ದ್ವಾರದವರೆಗೆ ರಸ್ತೆ ಕಾಮಗಾರಿಯ ಶಂಕುಸ್ಥಾಪನೆಯ ಶಿಲಾನ್ಯಾಸವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ನವೆಂಬರ್ 23 ರಂದು ನೆರವೇರಿಸಿದರು.

ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಎ ಕೋಟ್ಯಾನ್ ಸೇರಿದಂತೆ ಮತ್ತಿತರ ಅತಿಥಿ ಗಣ್ಯರು ಗುದ್ದಲಿ ಪೂಜೆಗೈದರು.

ಪಿಲಿಕುಳ ನಿಸರ್ಗಧಾಮದ ನಾಲ್ಕು ಪಥದ ರಸ್ತೆ ಮುಂದುವರೆದು 1.025 ಕಿ.ಮೀ ನಿಂದ 1.155 ಕಿ.ಮೀ ಪಿಲಿಕುಳ ಮಹಾದ್ವಾರದವರೆಗೆ ಕಾಂಕ್ರೀಟೀಕರಣವು ರೂ.69.00 ಲಕ್ಷ ವೆಚ್ಚದಲ್ಲಿ ಹಾಗೂ ವಾಮಂಜೂರು ಜಂಕ್ಷನ್‍ನಿಂದ ಪಿಲಿಕುಳ ಮುಖ್ಯದ್ವಾರದವರೆಗೆ ನಾಲ್ಕು ಪಥದ ರಸ್ತೆಯ ಉಳಿದ 130.00ಕಿ.ಮೀ ಉದ್ದದ ಸರಪಳಿಯನ್ನು ಚತುಷ್ಪತ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು 19.00ಮೀ ಅಗಲದ ಡಕ್ಟ್ ನಿರ್ಮಾಣವಾಗಲಿದ್ದು, ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಹೊರಾಂಗಣ ರಸ್ತೆ ಡಾಂಬರೀಕರಣ ಕಾಮಗಾರಿಯು ರೂ.200.00ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಯ ಡಾಂಬರೀಕರಣ ಕಾಮಗಾರಿ ನಡೆಯಲಿದೆ.

ಗುತ್ತು ಮನೆ ಮುಂಭಾಗ, ಓವರ್ ಹೆಡ್ ಟ್ಯಾಂಕ್ ಬಳಿ, ಕುದುರೆಮುಖ ಟ್ರೀ ಪಾರ್ಕ್, ಪಿಲಿಕುಳ ಪಂಪ್‍ಹೌಸ್, ಇತ್ಯಾದಿ ಭಾಗಗಳಿಗೆ ಸುಮಾರು 2.39ಕಿ.ಮೀಉದ್ದದ 3.75ಮೀ ಅಗಲಕ್ಕೆ ಡಾಂಬರು ರಸ್ತೆ ಹಾಗೂ ಬೋಟಿಂಗ್ ಪಾಯಿಂಟ್, ಇತ್ಯಾದಿ ಭಾಗಗಳಿಗೆ 915 ಉದ್ದದ ಇಂಟರ್‍ಲಾಕ್ ಪೇವ್‍ಮೆಂಟ್ ನಿರ್ಮಾಣವಾಗಲಿದೆ.

ಕಾರ್ಯಕ್ರಮದಲ್ಲಿ ಗುರುಪುರ ಜಿಲ್ಲಾ ಪಂಚಾಯತ್ ಸದಸ್ಯ ಯು.ಬಿ ಇಬ್ರಾಹಿಂ, ತಿರುವೈಲು ಮಹಾನಗರ ಪಾಲಿಕೆಯ ಸದಸ್ಯೆ ಹೇಮಲತಾ ರಘುಸಾಲ್ಯಾನ್ , ಮೂಡುಶೆಡ್ಡೆ ಗ್ರಾಮ ಪಂಚಾಯತ್‍ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments