Saturday, September 30, 2023
Homeಕರಾವಳಿಬಂಟ್ವಾಳ: ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ "ಮೊಬೈಲ್ ಪೋನ್ ವಿತರಣೆ"

ಬಂಟ್ವಾಳ: ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ “ಮೊಬೈಲ್ ಪೋನ್ ವಿತರಣೆ”

- Advertisement -



Renault

Renault
Renault

- Advertisement -

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಮತ್ತು ವಿಟ್ಲ ಪೋಷಣ್ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ” ಮೊಬೈಲ್ ಪೋನ್ ವಿತರಣೆ ” ಕಾರ್ಯಕ್ರಮ ಬಿಸಿರೋಡಿನ ಸ್ತ್ರೀ ಶಕ್ತಿಭವನದಲ್ಲಿ ನಡೆಯಿತು.

ಮೊಬೈಲ್ ಪೋನ್ ವಿತರಿಸಿ ಬಳಿಕ ಮಾತನಾಡಿದ ಬಂಟ್ವಾಳ ರಾಜೇಶ್ ನಾಯ್ಕ್ ಮಾತನಾಡಿ
ತಂತ್ರಜ್ಞಾನ ದ ಯುಗದಲ್ಲಿ ಸರಕಾರಿ ಇಲಾಖೆಯ ಯೋಜನೆಗಳನ್ನು ಶೀಘ್ರವಾಗಿ ಜನರಿಗೆ ತಲುಪಲು ಸಹಾಯ ವಾಗುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಅಭಿವೃದ್ಧಿಗೆ ಸಹಾಯವಾಗುವಂತೆ ಮತ್ತು ಇಲಾಖೆಯ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು, ನಿತ್ಯ ದಾಖಲೆಗಳನ್ನು ಅಪ್ಡೇಟ್ ಮಾಡುವ ಉದ್ದೇಶ ಮೊಬೈಲ್ ಪೋನ್ ಇಲಾಖೆ ನಿಮಗೆ ನೀಡಿದೆ. ಸರಕಾರ ಇಲಾಖೆಗಳಿಗೆ ನೀಡುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಯಶಸ್ವಿಯಾಗಲು ಅಧಿಕಾರಿಗಳ ಶ್ರಮ‌ ಅತ್ಯಂತ ಹೆಚ್ಚು ಎಂದು ಅವರು ಹೇಳಿದರು. ಕೊರೊನಾ ಸಂದರ್ಭದಲ್ಲಿ ನಿಮ್ಮ ಸೇವೆ ಅನನ್ಯವಾಗಿ ಇತ್ತು ಎಂದು ಅವರು ಹೇಳಿದರು.

ಬಂಟ್ವಾಳ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಜಣ್ಣ ಮಾತನಾಡಿ ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಮದ ಜನರ ಸಂಪೂರ್ಣ ಮಾಹಿತಿ ಇರುತ್ತದೆ.ಹಾಗಾಗಿ ಸರಕಾರದ ಯೋಜನೆಗಳು ಸರಿಯಾಗಿ ತಲುಪುವಲ್ಲಿ ಇಲಾಖೆಯ ಜವಬ್ದಾರಿ ಮಹತ್ತರ ವಾಗಿದೆ, ಜವಬ್ದಾರಿ ಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ ಹೆಗ್ಗಳಿಕೆ ಕೂಡ ಇವರದು ಎಂದು ಅವರು ಹೇಳಿದರು.
ಕಾರ್ಯಕ್ರಮ ದ ಅಧ್ಯಕ್ಷ ತೆ ವಹಸಿ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ
ತಂತ್ರಜ್ಞಾನದ ಮೂಲಕ ಕೆಲಸ ನಿರ್ವಹಿಸಿದಾಗ ಜನರಿಗೆ ಉತ್ತಮ‌ಸೇವೆ ನೀಡಲು ಮತ್ತು ಶೀಘ್ರವಾಗಿ ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಸ್ವಾಗತಿಸಿ, ವಿಟ್ಲ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ ವಂದಿಸಿದರು.

ಹಿರಿಯ ಮೇಲ್ವಿಚಾರಿಕಿ ಬಿ.ಭಾರತಿ ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳ ಮತ್ತು ವಿಟ್ಲ ಸೇರಿದಂತೆ ಒಟ್ಟು 588 ಮೊಬೈಲ್ ಫೋನ್ ನೀಡಲಾಯಿತು. ಇದರ ಜೊತೆಗೆ ಪವರ್ ಬ್ಯಾಂಕ್, ಮೆಮೊರಿ ಕಾರ್ಡ್, ಸ್ಕ್ರೀನ್ ಗಾರ್ಡ್ , ಬ್ಯಾಕ್ ಕವರ್ , ಇಯರ್ ಪೋನ್, ಪೌಚ್ ನೀಡಲಾಗಿದೆ

- Advertisement -

LEAVE A REPLY

Please enter your comment!
Please enter your name here

Most Popular

Recent Comments