Saturday, June 3, 2023
Homeಕರಾವಳಿಬಂಟ್ವಾಳ : ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರದ ದಿಮ್ಮಿಗಳ ವಶ

ಬಂಟ್ವಾಳ : ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರದ ದಿಮ್ಮಿಗಳ ವಶ

- Advertisement -


Renault

Renault
Renault

- Advertisement -

ಬಂಟ್ವಾಳ: ಬಂಟ್ವಾಳ ಅರಣ್ಯ ಇಲಾಖೆಯ ಕಾಳಬೈರವ ಗಸ್ತಿನ ತಂಡ ನ. 24ರ ರಾತ್ರಿ ಕಡೇಶ್ವಾಲ್ಯ ಗ್ರಾಮದ ಬುಡೋಳಿಯಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರದ ದಿಮ್ಮಿಗಳು ಹಾಗೂ ಲಾರಿಯನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ವಶಪಡಿಸಿಕೊಂಡ ಸೊತ್ತುಗಳು ಹಾಗೂ ವಾಹನದ ಮೌಲ್ಯ 5 ಲಕ್ಷ ರೂ. ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್, ಯಶೋಧರ, ಅರಣ್ಯ ರಕ್ಷಕರಾದ ಲಕ್ಷ್ಮೀನಾರಾಯಣ, ಜಿತೇಶ್ ವಿ, ಸಿಬ್ಬಂದಿ ಪ್ರವೀಣ್ ಕಲ್ಮಲೆ, ಭಾಸ್ಕರ ಡಿ, ಜಯರಾಮ್ ಪಾಲ್ಗೊಂಡಿದ್ದರು.

ಡಿಸಿಎಫ್ ಡಾ| ಕರಿಕಾಲನ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಸುಬ್ರಹ್ಮಣ್ಯ ರಾವ್ ಅವರು ಪ್ರಕರಣದ ಮುಂದಿನ ತನಿಖೆ ನಡೆಸಲಿದ್ದಾರೆ. ಕಾರ್ಯಾಚರಣೆಯ ವೇಳೆ ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿ ಸಿಬಂದಿ ಸಹಕರಿಸಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments