Sunday, September 24, 2023
Homeಕರಾವಳಿಬಂಟ್ವಾಳ : ಕೋವಿಡ್‍19 ಜಾಗೃತಿ ಮೂಡಿಸುವ ಸಂಚಾರಿ ಆಟೋಗೆ ಚಾಲನೆ

ಬಂಟ್ವಾಳ : ಕೋವಿಡ್‍19 ಜಾಗೃತಿ ಮೂಡಿಸುವ ಸಂಚಾರಿ ಆಟೋಗೆ ಚಾಲನೆ

- Advertisement -



Renault

Renault
Renault

- Advertisement -

ಬಂಟ್ವಾಳ : ಕರೋನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೊರೋನ ವೈರಸ್‍ ಹರಡುವಿಕೆಯನ್ನು ತಡೆಯಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಬೇಕು ಎನ್ನುವ ಕಾಳಜಿಯೆಾಂದಿಗೆ ಇಂದು ಬಂಟ್ವಾಳ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ ಇವರ ಸಹಯೋಗದೊಂದಿಗೆ ಆಯೋಜಿಸಿದ ಕೋವಿಡ್-19 ಜನಾಂದೋಲನ ಕಾರ್ಯಕ್ರಮದಲ್ಲಿ ಕೋವಿಡ್‍19 ಬಗ್ಗೆ ಜಾಗೃತಿ ಮೂಡಿಸುವ ಸಂಚಾರಿ ಆಟೋಗೆ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇದರ ಅಧ‍್ಯಕ್ಷರಾದ ಶ್ರೀ. ಮಹಮ್ಮದ್‍ ಇಮ್ತಿಯಾಜ್‍ ಅಹಮ್ಮದ್‍, ಹಿರಿಯ ಸಿವಿಲ್‍ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ, ಬಂಟ್ವಾಳ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ.ರಮ್ಯ ಹೆಚ್.ಅರ್, ಪ್ರಧಾನ ಸಿವಿಲ್‍ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಬಂಟ್ವಾಳ, ಇವರು ಹಸಿರು‍ ನಿಶಾನೆ ತೋರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ಯಾನಲ್‍ ವಕೀಲರುಗಳು ಹಾಗೂ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು , ನ್ಯಾಯಾಲಯದ ಸಿಬ್ಬಂದಿ ವರ್ಗದವರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ನೀಡಿದ ಕರಪತ್ರಗಳನ್ನು ಬಂಟ್ವಾಳ ಪಟ್ಟಣ, ಹಾಗೂ ಜನಸಂದಣಿ ಇರುವ ಪ್ರದೇಶದಗಳಾದ ಮಾರುಕಟ್ಟೆ ಬಸ್ಸು ತಂಗುದಾಣಗಳಲ್ಲಿ ಮಾಸ್ಕ್ಗ ಳನ್ನು ಉಚಿತವಾಗಿ ವಿತರಣೆ ಮಾಡುವ ಮೂಲಕ ಜನ ಜಾಗೃತಿ ಮೂಡಿಸಿದರು.

ಸೋಂಕು ತಡೆಗಟ್ಟಲು ಸರಳ ಮಾರ್ಗಗಳಾದ ಮಖಕವಚ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಪದೇಪದೇ ಕೈ ತೊಳೆಯುವುದು, ಅಸ್ವಚ್ಚತಾ ಸ್ಧಳಗಳನ್ನು ಮುಟ್ಟದಿರುವುದು, ಸಾರ್ವಜನಿಕ ಸ್ಧಳಗಳಲ್ಲಿ ಉಗುಳದಿರುವುದು ಸೇರಿದತೆ ಮತ್ತಿತರೆ ಸೂಚನೆಗಳನ್ನು ಪಾಲಿಸಿದಲ್ಲಿ ಕೊರೋನ ಸೋಂಕಿನಿಂದ ದೂರವಾಗಲು ಸಾಧ್ಯವಾಗುತ್ತದೆ ಎಂಬ ಬಗ್ಗೆ ಬಿ.ಸಿ ರೋಡ್, ಕೈಕಂಬ, ಬಂಟ್ವಾಳ ಪೇಟೆಗಳಲ್ಲಿ ಆಟೋದಲ್ಲಿ ದ್ವನಿವರ್ಧಕದ ಮೂಲಕ ಆಡಿಯೋ ಪ್ರಸಾರ ಮಾಡಿ ಜನ ಜಾಗೃತಿ ಕೈಗೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್‍ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ಬಂಟ್ವಾಳ, ನ್ಯಾಯಾಧೀಶರಾದ ಶ್ರೀಮತಿ.ಶಿಲ್ಪಾ ಜಿ ತಿಮ್ಮಾಪುರ, ಸಾರ್ವಜನಿಕ ಆರೋಗ್ಯ ಅಧಿಕಾರಿ ಶ್ರೀಮತಿ.ದೀಪಾ, ವಕೀಲರ ಸಂಘದ ಅಧ್ಯಕ್ಷರಾದ ಶ್ರೀ.ದೀಪಕ್‍ ಕುಮಾರ್ ಜೈನ್, ಉಪಾಧ್ಯಕ್ಷರಾದ ಶ್ರೀ.ಚಂದ್ರಶೇಖರ ಪುಂಚಮೆ ,ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಯ ಪ್ಯಾನಲ್‍ ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಧಿತರಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments