Tuesday, September 27, 2022
Homeಕರಾವಳಿಬಂಟ್ವಾಳ: 27 ಕೋಟಿಗೂ ಮಿಕ್ಕಿದ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ

ಬಂಟ್ವಾಳ: 27 ಕೋಟಿಗೂ ಮಿಕ್ಕಿದ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ

- Advertisement -
Renault

Renault

Renault

Renault


- Advertisement -

ಬಂಟ್ವಾಳ: ಸರಕಾರದ ಯೋಜನೆಗಳು ಸಮರ್ಪಕವಾಗಿ  ಬಳಕೆಯಾದರೆ ಗ್ರಾಮದ ಅಭಿವೃದ್ಧಿ ಸಾಧ್ಯ ,  ಅ ನಿಟ್ಟಿನಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗ್ರಾಮದ ಅಭಿವೃದ್ಧಿ ಗಾಗಿ ಅನುದಾನದ ಜೊತೆ ಉತ್ತಮ ಯೋಜನೆ ಗಳನ್ನು ಜಾರಿಮಾಡುತ್ತಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ಮಂಗಳವಾರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲಪಡ್ನೂರು, ಕೊಳ್ನಾಡು ಹಾಗೂ ಸಾಲೆತ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 27 ಕೋಟಿಗೂ ಮಿಕ್ಕಿದ ಕಾಮಗಾರಿ ಗಳ ಉದ್ಘಾಟನೆ, ಶಿಲಾನ್ಯಾಸ ಹಾಗೂ ಕಾಮಗಾರಿಗಳ ವೀಕ್ಷಣೆ ನಡೆಸಿ ಬಳಿಕ ಮಾತನಾಡಿದರು.
ಗ್ರಾಮದ ಅಭಿವೃದ್ಧಿ ಯೇ ಮುಖ್ಯಮಂತ್ರಿ ಯವರ ಮೂಲ ಧ್ಯೇಯ ವಾಕ್ಯ ವಾಗಿದ್ದು ನಾವು ಅವರ ಯೋಜನೆಗೆ ಪೂರಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಸರಕಾರದ ಯೋಜನೆ ಗಳು ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾಗಿ ಸಿಗುವ ರೀತಿಯಲ್ಲಿಯೂ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.

ಗ್ರಾ.ಪಂ.ವ್ಯಾಪ್ತಿಯಲ್ಲಿ ಇರುವ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಕೈಗೊಂಡು ಮೂಲಭೂತ ಸೌಕರ್ಯಗಳನ್ನು ಮತ್ತು   ಅಭಿವೃದ್ಧಿ ಕಾರ್ಯಗಳನ್ನು ಹಂತಹಂತವಾಗಿ ಮಾಡಲಾಗುವುದು ಎಂದು ಅವರು ಹೇಳಿದರು

ಈ‌ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ , ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವಿಶ್ ಶೆಟ್ಟಿ ಬಲಿಪಗುಳಿ ಪ್ರಮುಖರಾದ ರಾಜಾರಾಮ್ ಭಟ್, ರೇಶ್ಮಾ ಶಂಕರಿ,ಸತೀಶ್ ಭಟ್, ಮುರಳಿ ಭಟ್,ಸುಂದರ ಶೆಟ್ಟಿ, ನಾಗೇಶ್ ಶೆಟ್ಟಿ, ಅಭಿಷೇಕ್ ರೈ, ಅರವಿಂದ ರೈ, ವಿಶ್ವನಾಥ ಅಡಪ,ನಾರಾಯಣ ಪೂಜಾರಿ, ನಾಗೇಶ್ ಗೌಡ ಬಣ, ಲೋಕಪ್ಪ ಗೌಡ ಬಣ, ಪ್ರೇಮಲತಾ,ಮಜಿ ರಾಮ್ ಭಟ್ ದಿವಾಣ ಶಂಕರ ಭಟ್, ಶಿವರಾಂ ನಾಯ್ಕ ದಿವಾಣ, ಸೀತಾರಾಮ ಗೌಡ, ಆನಂತ್ ಭಟ್, ಮಾಧವ ರೈ, ಬಾಲಕೃಷ್ಣ ರೈ,

ಶಿವಪ್ರಸಾದ್ ಶೆಟ್ಟಿ ಅನೆಯಲ,ಕುಲ್ಯಾರ್ ನಾರಾಯಣ ಶೆಟ್ಟಿ, ಜಯರಾಮ್ ನಾಯ್ಕ್ ಕುಂಟ್ರಕಲ ,ರಾಜಾರಾಮ್ ಹೆಗ್ಡೆ, ವಿಶ್ವನಾಥ್ ಪೂಜಾರಿ ಕೋಡಿ, ಬಾಲಕೃಷ್ಣ ಸೆರ್ಕಳ, ಪ್ರಶಾಂತ್ ಕುಮಾರ್ ಶೆಟ್ಟಿ,ಸತೀಶ್ ನಾಯ್ಕ್, ವೇಣುಗೋಪಾಲ್ ಮಂಕುಡೆ, ಹರೀಶ್ ಟೈಲರ್

ದೇವಿದಾಸ್ ಶೆಟ್ಟಿ,ಕುಲ್ಯಾರ್ ನಾರಾಯಣ್ ಶೆಟ್ಟಿ,ಜಯರಾಮ್ ನಾಯ್ಕ್,  ವಿದ್ಯೆಶ್  ರೈ, ರಾಮ ನಾಯ್ಕ್, ಚಂದ್ರಾವತಿ ಮೇಗಿನ ಮಲಾರು, ಶಂಕರ್ ಶೆಟ್ಟಿಗಾರ್, ವಿಶ್ವನಾಥ್ ಪೂಜಾರಿ ಕೋಡಿ,ರಾಮಕೃಷ್ಣ ಚೌಟ, ಆನಂದ ಪೂಜಾರಿ, ನಾಗರಾಜ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

 ಕಾಮಗಾರಿಗಳ ವಿವರ

1. ಬೊಳ್ಳೆಚ್ಚಾರು ರಸ್ತೆ ಅಭಿವೃದ್ಧಿ – 5ಲಕ್ಷ
2. ಮಂಕುಡೆ – ಪರ್ತಿಪ್ಪಾಡಿ -ಕೆಮರಡ್ಕ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿ – 7ಲಕ್ಷ
3. ಮಂಕುಡೆ ವಿಷ್ಣುಮೂರ್ತಿ
ದೇವಸ್ಥಾನ ರಸ್ತೆ ಅಭಿವೃದ್ಧಿ – 5ಲಕ್ಷ
4. ಕುಂಟ್ರಕಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ -10.52ಲಕ್ಷ
5. ಕುಂಟ್ರಕಲ ವಿದ್ಯುತ್ ಪರಿವರ್ತಕ
6. ಸೆರ್ಕಳ – ಪೀಲ್ಯಡ್ಕ ರಸ್ತೆ ಅಭಿವೃದ್ಧಿ – 5ಲಕ್ಷ
7. ಸಾಲೆತ್ತೂರು -ಪೀಲ್ಯಡ್ಕ – ಮಂಚಿ ರಸ್ತೆ ಅಭಿವೃದ್ಧಿ – 5ಲಕ್ಷ
8. ಕಾಡುಮಠ – ಕಡೆಪಿಕೇರಿ ರಸ್ತೆ ಅಭಿವೃದ್ಧಿ -10ಲಕ್ಷ
9. ಪೆರ್ಲದಬೈಲು – ಬರ್ಕಳ ಮಾರಿಗುಡಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ – 15ಲಕ್ಷ
10. ಸಾಲೆತ್ತೂರು – ತಾಮರಾಜೆ ದೈವಸ್ಥಾನ ರಸ್ತೆ ಅಭಿವೃದ್ಧಿ – 5ಲಕ್ಷ
11. ಸಾಲೆತ್ತೂರು ಸದಾಶಿವ ದೇವಸ್ಥಾನ ರಸ್ತೆ ಅಭಿವೃದ್ಧಿ – 20 ಲಕ್ಷ
12. ಕಟ್ಟತ್ತಿಲ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ – 5ಲಕ್ಷ
13. ಕಟ್ಟತ್ತಿಲ ಮಠ  ರಸ್ತೆ ಅಭಿವೃದ್ಧಿ – 25ಲಕ್ಷ
14. ಕಟ್ಟತ್ತಿಲಕೋಡಿ – ನಂದ್ರಬೈಲು ರಸ್ತೆ ಅಭಿವೃದ್ಧಿ – 20ಲಕ್ಷ
15. ಕೋಕಳ – ಭಂಡಾರದಮನೆ ರಸ್ತೆ ಅಭಿವೃದ್ಧಿ – 5ಲಕ್ಷ
16. ಕುಡ್ತಮುಗೇರು -ಪಾದೇರಪಡ್ಪು  -ಕುದ್ರಿಯ  ರಸ್ತೆ ಅಭಿವೃದ್ಧಿ – 10ಲಕ್ಷ
20.ಕೊಡಂಗೆ – ಕುದ್ರಿಯ ರಸ್ತೆ ಅಭಿವೃದ್ದಿ -5ಲಕ್ಷ
25. ಚೌಕ ಮಲರಾಯ ದೈವಸ್ಥಾನ ರಸ್ತೆ ಅಭಿವೃದ್ಧಿ -10ಲಕ್ಷ26.ಸೆರ್ಕಳ -ಪೀಲ್ಯಡ್ಕ -ಸಾಗು ರಸ್ತೆ ಅಭಿವೃದ್ಧಿ -10ಲಕ್ಷ.
27. ಕೋಡಪದವು ದಿವಾಣ ಮಜಿ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ.
28. ಎರ್ಮನಿಲೆ ಎಂಬಲ್ಲಿ ಕಿಂಡಿ ಅಣೆಕಟ್ಟು ಶಿಲಾನ್ಯಾಸ – 2 ಕೋಟಿ ಸೇರಿದಂತೆ ವಿಟ್ಲ ಪಡ್ನೂರು ಗ್ರಾಮದಲ್ಲಿ ಒಟ್ಟು 6.25 ಕೋಟಿ ಅನುದಾನಗಳ ಶಿಲಾನ್ಯಾಸ ಶಂಕುಸ್ಥಾಪನೆ ಮತ್ತು ಕಾಮಗಾರಿಗಳ ವೀಕ್ಷಣೆ ನಡೆಸಿದರು.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments