- Advertisement -
ಮಂಗಳೂರು : ಫ್ರಾನ್ಸ್ ಫೇಸ್ಬುಕ್ ಪ್ರಕರಣಕ್ಕೆ ಪ್ರತಿಕಾರವಾಗಿ ಬಾಂಗ್ಲಾದೇಶದ ಕೋಮಿಲ್ಲಾ ಜಿಲ್ಲೆಯಲ್ಲಿ ಯಾವುದೇ ತಪ್ಪು ಮಾಡದ ಅಮಾಯಕ ಹಿಂದೂಗಳ ಮನೆ ಮೇಲೆ ಮತಾಂಧರು ನುಗ್ಗಿ ದಾಂದಲೆ ನಡೆಸಿ, ಸಿಕ್ಕ ಸಿಕ್ಕ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ, 100 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿವ ಕುಕೃತ್ಯವನ್ನು ಮಾಡಿದ್ದಾರೆ, ಭ್ರಾಹ್ಮಣ್ ಬರ್ಹಿಯಾ ಜಿಲ್ಲೆಯ ಸೇರಿದಂತೆ 15 ದೇಗುಲಗಳನ್ನು ಧ್ವಂಸಗೊಳಿಸಿ ಮತಾಂಧತೆ ಮೆರೆದ ಈ ಕೃತ್ಯವನ್ನು ವಿಶ್ವ ಹಿಂದು ಪರಿಷದ್ ಮಂಗಳೂರು ಖಂಡಿಸುತ್ತದೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಭಾರತ ಸರಕಾರ ಮಧ್ಯಪ್ರವೇಶಿಸಿ ಅಲ್ಲಿರುವ ದೇಗುಲಗಳಿಗೆ ಮತ್ತು ಹಿಂದುಗಳಿಗೆ ಸೂಕ್ತ ರಕ್ಷಣೆ ನೀಡಬೇಕಾಗಿ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ತಿಳಿಸಿದರು