Monday, October 2, 2023
Homeಕರಾವಳಿಬಿಜೆಪಿ ಭ್ರಷ್ಟಾಚಾರದ ಪಕ್ಷ ವಲ್ಲ, ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ : ನಳಿನ್ ಕುಮಾರ್ ಕಟೀಲ್

ಬಿಜೆಪಿ ಭ್ರಷ್ಟಾಚಾರದ ಪಕ್ಷ ವಲ್ಲ, ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ : ನಳಿನ್ ಕುಮಾರ್ ಕಟೀಲ್

- Advertisement -



Renault

Renault
Renault

- Advertisement -

ಮಂಗಳೂರು: ಇನ್ನೂ ಎರಡುವರೆ ವರ್ಷಗಳ ಕಾಲ ಯಡಿಯೂರಪ್ಪ ಅವರ ಆಡಳಿತದಲ್ಲಿ ನೆಮ್ಮದಿಯಿಂದ ಇರಿ ಎಂದು ಜನರು ಬಿಜೆಪಿಗೆ ಆಶೀರ್ವದಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಎರಡೂವರೆ ವರ್ಷಗಳ ಬಿಜೆಪಿ ಆಡಳಿತವನ್ನು ಮೌನವಾಗಿ ಸಹಿಸಿಕೊಳ್ಳಿ ಎಂದು ಜನರು ವಿರೋಧ ಪಕ್ಷದ ವರಿಗೆ ಉತ್ತರ ತಕ್ಕ ಕೊಟ್ಟಿದ್ದಾರೆ‌.

ಜನತಾ ಜನಾರ್ದನನ ಎದುರು ಕನಕಪುರ ಬಂಡೆ ಪುಡಿಯಾಗಿದೆ.‌ ಹುಲಿಯಾ ಗೂಡು ಸೇರಿದ್ದಾರೆ. ಹಾಗಾಗಿ ಜನರ ಉತ್ತರವನ್ನು ವಿನಂಬ್ರವಾಗಿ ಸ್ವೀಕರಿಸಿ, ಬಿಜೆಪಿ ಭ್ರಷ್ಟಾಚಾರದ ಪಕ್ಷ ವಲ್ಲ, ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಎಂಬ ಸಂದೇಶವನ್ನು ಜನರು ನೀಡಿದ್ದು, ಈ ಚುನಾವಣೆಯ ಮೂಲಕ ರಾಷ್ಟ್ರದ ಹಾಗೂ ರಾಜ್ಯದ ಜನರು ಕಾಂಗ್ರೆಸ್​​ ತೆಗೆದು ಬಿಸಾಡಿದ್ದಾರೆ ಎಂದು ಅವರು ಆಕ್ರೋಷ ವ್ಯಕ್ತಪಡಿಸಿದರು.

ರಾಜರಾಜೇಶ್ವರಿ ನಗರ ಮತ್ತು ಶಿರಾಗೆ ನಡೆದ ಉಪ ಚುನಾವಣೆಯಲ್ಲಿ ಕ್ರಮವಾಗಿ ಬಿಜೆಪಿಯ ಮುನಿರತ್ನ ಮತ್ತು ರಾಜೇಶ್ ಗೌಡ ಅವರು ಗೆಲುವು ಸಾಧಿಸಿದ್ದಾರೆ. ಇನ್ನು ರಾಜರಾಜೇಶ್ವರಿ ನಗರದ ಉಪಚುನಾವಣೆಯನ್ನು ಡಿಕೆ ಸಹೋದರರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments