- Advertisement -
ಮಂಗಳೂರು: ಬೋಟ್ ದುರಂತದಲ್ಲಿ ನಾಪತ್ತೆಯಾದ ಆರು ಮಂದಿಯಲ್ಲಿ ಐದು ಮಂದಿಯ ಮೃತದೇಹ ಪತ್ತೆಯಾಗಿವೆ.
ನಿನ್ನೆ ಪಾಂಡುರಂಗ ಸುವರ್ಣ ಮತ್ತು ಪ್ರೀತಂ ಎಂಬ ಮೀನುಗಾರರ ಮೃತದೇಹ ಪತ್ತೆಯಾಗಿದ್ದರೆ, ಇಂದು ಮಧ್ಯಾಹ್ನ ಚಿಂತನ್ ಮತ್ತು ಹಸೈನಾರ್ ಅವರ ಮೃತದೇಹ ಪತ್ತೆಯಾಗಿವೆ.
ಮಧ್ಯಾಹ್ನದ ಬಳಿಕ ಝಿಯಾದ್ ಎಂಬುವರ ಮೃತದೇಹ ಪತ್ತೆಯಾಗಿದ್ದು, ಅಲ್ಲಿಗೆ ನಾಪತ್ತೆಯಾದ ಆರು ಮಂದಿಯಲ್ಲಿ ಐವರ ಮೃತದೇಹ ಪತ್ತೆಯಾದಂತಾಗಿದೆ. ಆರನೇ ಮೃತದೇಹ ಮೇಲಕ್ಕೆತ್ತುವ ವೇಳೆ ಮತ್ತೆ ಸಮುದ್ರದಾಳಕ್ಕೆ ಮೃತದೇಹ ಬಿದ್ದಿದೆ. ಅನ್ಸಾರ್ ಎಂಬ ಮೀನುಗಾರರ ಮೃತದೇಹವನ್ನು ಮುಳುಗು ತಜ್ಞರು ಮೇಲಕ್ಕೆ ತರುವ ಸಂದರ್ಭದಲ್ಲಿ ಕೈಜಾರಿದ್ದು, ಮತ್ತೆ ಸಮುದ್ರದೊಳಗೆ ಬಿದ್ದಿದೆ.