ಮಂಗಳೂರು: ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗೆ ರಾಗಿಂಗ್ ಮಾಡಿದ ಆರೋಪದಡಿಯಲ್ಲಿ ನಗರದ ಖಾಸಗಿ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.
ಬಂಧಿತ ವಿದ್ಯಾರ್ಥಿಗಳನ್ನು ಜಿಷ್ಣು (20), ಶ್ರೀಕಾಂತ್ (20), ಅಶ್ವಥ್ (20), ಸಾಯಿನಾಥ್ (22), ಅಭಿರತ್ ರಾಜೀವ್ (21), ರಾಹುಲ್ (21), ಜಿಷ್ಣು(20), ಮುಕ್ತಾರ್ ಅಲಿ (19), ಮಹಮ್ಮದ್ ರಝೀಮ್ (20) ಎಂದು ಗುರುತಿಸಲಾಗಿದೆ. ರಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಮತ್ತು ಬಂಧಿತರೆಲ್ಲರೂ ಕೇರಳ ಮೂಲದವರಾಗಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶುಕ್ರವಾರ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ವಿರುದ್ಧ ಐ.ಪಿ.ಸಿ ಮತ್ತು ಕರ್ನಾಟಕ ಎಜುಕೇಶನ್ ಆಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೊದಲ ವರ್ಷದ ಬಿ- ಫಾರ್ಮಾ ವಿದ್ಯಾರ್ಥಿಗೆ ತಲೆಕೂದಲು ಮತ್ತು ಮೀಸೆ ತೆಗೆದು ಬರುವಂತೆ ಆರೋಪಿಗಳು ಹೇಳಿದ್ದರು.
ಆದರೆ ಹಾಗೆ ಮಾಡದೇ ಇದ್ದಾಗ ಹಲ್ಲೆ ನಡೆಸಿದ್ದು, ಐದಾರು ದಿನಗಳ ಕಾಲ ನಿರಂತರ ರಾಗಿಂಗ್ ಮಾಡಿದ್ದರು.