Thursday, October 6, 2022
Homeಕರಾವಳಿಮಂಗಳೂರು - ಪೂನಾ: ನಾನ್ ಎಸಿ. ಸ್ಲೀಪರ್ ಬಸ್ ಸೌಲಭ್ಯ

ಮಂಗಳೂರು – ಪೂನಾ: ನಾನ್ ಎಸಿ. ಸ್ಲೀಪರ್ ಬಸ್ ಸೌಲಭ್ಯ

- Advertisement -
Renault

Renault

Renault

- Advertisement -


ಮಂಗಳೂರು : ಕೆಎಸ್‍ಆರ್‍ ಟಿಸಿ ಮಂಗಳೂರು ವಿಭಾಗದ ಬಸ್ಸು ನಿಲ್ದಾಣದಿಂದ ಪೂನಾಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ನಾನ್ ಎ.ಸಿ. ಸ್ಲೀಪರ್ ವಾಹನಗಳೊಂದಿಗೆ ಸಾರಿಗೆ ಸೌಲಭ್ಯವನ್ನು ಅಕ್ಟೋಬರ್ 26 ರಿಂದ ಪುನ: ಆರಂಭಿಸಲಾಗಿದೆ.

ಮಂಗಳೂರಿನಿಂದ ನಾನ್ ಎಸಿ. ಸ್ಲೀಪರ್ ಬಸ್ ಸಂಜೆ 4 ಗಂಟೆಗೆ ಹೊರಟು ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಬೆಳಗಾವಿ, ಸತಾರ ಮೂಲಕ ಪೂನಾಕ್ಕೆ ಬೆಳಿಗ್ಗೆ 6 ಗಂಟೆಗೆ ತಲುಪಲಿದೆ. ಪೂನಾದಿಂದ ಸಂಜೆ 6.30 ಕ್ಕೆ ಸತಾರ, ಬೆಳಗಾವಿ, ಅಂಕೋಲಾ, ಭಟ್ಕಳ, ಕುಂದಾಪುರ, ಉಡುಪಿ, ಪಡುಬಿದ್ರಿ, ಮೂಲ್ಕಿ, ಸುರತ್ಕಲ್ ಮೂಲಕ ಮಂಗಳೂರಿಗೆ ಬೆಳಿಗ್ಗೆ 7 ಗಂಟೆಗೆ ತಲುಪಲಿದೆ.

ಪ್ರಯಾಣ ದರ ರೂ. 1,500.

ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‍ಒಪಿ ನಿರ್ದೇಶನಗಳಂತೆ ಪ್ರಯಾಣಿಸಲು ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಮುಂಗಡ ಟಿಕೇಟು ಬುಕ್ಕಿಂಗ್ ವ್ಯವಸ್ಥೆಗಾಗಿ ಆನ್‍ಲೈನ್ ನಲ್ಲಿ ತಿತಿತಿ.ಞsಡಿಣಛಿ.iಟಿ ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್‍ನ್ನು ಸಂಪರ್ಕಿಸಬಹುದು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -


LEAVE A REPLY

Please enter your comment!
Please enter your name here

Most Popular

Recent Comments