ಮಂಗಳೂರು : ಮಕ್ಕಳ ದಿನಾಚರಣೆ ಮತ್ತು ದೀಪಾವಳಿ ಪ್ರಯುಕ್ತ ಅನಾಥಾಶ್ರಮಗಳಿಗೆ ತೆರೆಳಿ ಆಟಿಕೆಗಳನ್ನು ವಿತರಿಸುವ ಕಾರ್ಯಕ್ರಮ ಮಂಗಳೂರು ವಾರ್ತೆ ತಂಡದ ಸದಸ್ಯರು ಕೈಗೊಂಡರು.
ಅನಾಥರು ಯಾರೊಬ್ಬರೂ ಇಲ್ಲ, ದೇವರ ಭವ್ಯತೆಯು ಮಗುವಿನ ಮುಗ್ಧತೆಯಲ್ಲಿ ಪ್ರತಿಫಲಿಸುತ್ತದೆ. ಈ ಮಕ್ಕಳ ದಿನಾಚರ ಣೆ ಮತ್ತು ದೀಪಾವಳಿ ಅಸಹಾಯಕ ಮಕ್ಕಳ ಮುಖದ ಮೇಲೆ ನಗು ಬೀರಿ. ಅವರ ಜೀವನವನ್ನು ಬೆಳಗಲಿ, ಮುಗ್ಧರಲ್ಲಿ ಸಂತೋಷ ಹರಡಲಿ ಎಂದು ಶೈನ್ ಸಿಟಿ ರಜಾಕ್ ಹೇಳಿದರು.
ಸ್ನೇಹಾಲಯ ಬಿಜೈ, ಫಾದರ್ ಮುಲ್ಲರ್ ಕಂಕನಾಡಿ, ಭಗಿನಿ ಸಮಾಜ ಜೆಪ್ಪು,, ಕುತ್ತಾರ್ ಆಶ್ರಮ, ಹಿದಾಯತ್ ಪೌಂಡೇಶನ್, ಶೇರ್ ಅಂಡ್ ಕೇರ್ ಕುಂಜಾಲ್ ಕಟ್ಟೆ, ಇಫ್ಯಾಂಟ್ ಮೇರಿ ಚಿಲ್ಡ್ರನ್ ಹೋಮ್ ಕುಲಶೇಖರ, ರಿಯಾ ಫೌಂಡೇಶನ್, ಕುಲಶೇಖರ, ಸಂವೇದನಾ ಪಂಪವೆಲ್, ಸ್ನೇಹ ಧಾಮ ಗುರುಪುರ ಮೊದಲಾದ 13 ಆಶ್ರಮಗಳಿಗೆ ಭೇಟಿ ನೀಡಿ ಆಟಿಕೆಗಳನ್ನು ನೀಡ ಲಾಯಿತು.
ಡಾ.ಅನಂತ್ ಪ್ರಭು ಜಿ, ಡಾ.ಮುಸ್ತಫಾ, ವೈಕುಂಠ ಪ್ರಭು, ಸುದೇಶ್ ಭಂಡಾರಿ, ಅಜ್ಫಾರ್ ರಜಾಕ್, ಸುನಿಲ್ ಅಂಕೋಲಾ, ವಿಶಾಲ್ ಶೆಟ್ಟಿ, ಹರೀಶ್ ಇರಾ, ವಿದಾತ್ ಶೆಟ್ಟಿ ಮತ್ತು ಮಂಗಳೂರುವರ್ತೆ.ಕಾಮ್ ತಂಡ ದ ಸದಸ್ಯರು ಉಪಸ್ಥಿತರಿದ್ದರು.




