Sunday, May 28, 2023
Homeಕರಾವಳಿಮಂಗಳೂರು ವಿವಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಅರಬಿ ವಜಾ

ಮಂಗಳೂರು ವಿವಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಅರಬಿ ವಜಾ

- Advertisement -


Renault

Renault
Renault

- Advertisement -

ಮಂಗಳೂರು: ಮಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಹೊತ್ತಿದ್ದ ಪ್ರಾಧ್ಯಾಪಕನನ್ನು ಸೇವೆಯಿಂದಲೇ ವಜಾಗೊಳಿಸಲು ವಿವಿ ಸಿಂಡಿಕೇಟ್ ಸಭೆ ನಿರ್ಣಯ ಕೈಗೊಂಡಿದೆ.

ವಿವಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಅರಬಿ ಎಂಬವರು ವಜಾಗೊಂಡಿರುವ ವ್ಯಕ್ತಿ.

2018ರಲ್ಲಿ ಸಂಶೋಧನಾ ವಿದ್ಯಾರ್ಥಿನಿ ಸಾಕ್ಷ್ಯಸಹಿತ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ಈ ಸಂಬಂಧ ಆಯೋಗದ ನೋಟಿಸ್ ನೀಡಿದ್ದು, ವಿವಿ ಆಡಳಿತದ ಸಮಿತಿ ತನಿಖೆ ಕೈಗೊಂಡಿತ್ತು. ಆ ಬಳಿಕ ವರದಿಯನ್ನು 2018ರ ಡಿಸೆಂಬರ್​ನಲ್ಲೇ ಅಂದಿನ ಕುಲಸಚಿವರಾಗಿದ್ದ ಎಂ.ಎಂ.ಖಾನ್​ಗೆ ಸಲ್ಲಿಸಲಾಗಿತ್ತು. ಆದರೆ ವರದಿಯನ್ನು ತೆರೆಯದೇ ಖಾನ್ ಮುಚ್ಚಿಟ್ಟಿದ್ದರು.

ಇತ್ತೀಚೆಗೆ ಮಹಿಳಾ ಆಯೋಗ ವರದಿ ಕೇಳಿದ್ದರಿಂದ ಸಿಂಡಿಕೇಟ್ ಎದುರು ವರದಿ ಪ್ರಸ್ತಾಪ ಮಾಡಿದ್ದು, ವರದಿಯಲ್ಲಿ ಪ್ರೊ.ಅರಬಿ ತಪ್ಪಿತಸ್ಥ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.

ಇದೀಗ ವರದಿ ಮುಚ್ಚಿಟ್ಟಿದ್ದ ಹಿಂದಿನ ಕುಲಸಚಿವ ಎಂ.ಎಂ.ಖಾನ್ ವಿರುದ್ದವೂ ಸರ್ಕಾರಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments