Wednesday, May 31, 2023
Homeಕರಾವಳಿಮಕ್ಕಳಲ್ಲಿ ತಮ್ಮ ಭವಿಷತ್ತಿನ ಕನಸನ್ನು ಪ್ರೇರೇಪಿಸುವ ಸಮಾಜ ನಿರ್ಮಾನವಾಗಬೇಕು

ಮಕ್ಕಳಲ್ಲಿ ತಮ್ಮ ಭವಿಷತ್ತಿನ ಕನಸನ್ನು ಪ್ರೇರೇಪಿಸುವ ಸಮಾಜ ನಿರ್ಮಾನವಾಗಬೇಕು

- Advertisement -


Renault

Renault
Renault

- Advertisement -

ಮಂಗಳೂರು : ಮಕ್ಕಳಲ್ಲಿ ತಮ್ಮ ಭವಿಷತ್ತಿನ ಕನಸನ್ನು ಪ್ರೇರೇಪಿಸುವ ಸಮಾಜ ನಿರ್ಮಾನವಾಗಬೇಕು. ಹಾಗೂ ಮಕ್ಕಳ ರಕ್ಷಣೆಗೋಷ್ಕರ ನಾವೆಲ್ಲರೂ ಕೈಜೋಡಿಸುತ್ತಾ ಅವರ ಹಕ್ಕುಗಳಿಗೆ ಶ್ರಮಿಸಬೇಕೆಂದು ಶ್ರೀಮತಿ ರೇವತಿ ಠಾಣಾಧಿಕಾರಿ ಮಹಿಳಾ ಪೋಲೀಸ್ ಠಾಣೆ ಪಾಂಡೇಶ್ವರ ಇವರು ಸ್ಕೂಲ್ ಆಫ್ ಸೋಸಿಯಲ್ ವಕ್ ರೋಶನಿ ನಿಲಯದಲ್ಲಿ ಚೈಲ್ಟ ಲೈನ್ ಸೆ ದೋಸ್ತಿ ವೀಕ್ ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಮಾಡಿದರು

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಗಟ್ರೂಡ್ ವೇಗಸ್ ರವರು ಮಕ್ಕಳ ಹಕ್ಕುಗಳಿಗೋಸ್ಕರ ಪಾಲನೆ ಪೋಷಣೆ ಸಂಸ್ಥೆಗಳು ಮತ್ತು ಚೈಲ್ಡ್ ಲೈನ್ ಮಕ್ಕಳ ರಕ್ಷಣೆಗಾಗಿ ಹಗಳಿರುಳು ದುಡಿಯುತ್ತಿದೆ ಎಂದು ಅಭಿನಂದಿಸಿದರು. ಈ ಕಾರ್‍ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಚೈಲ್ಡ್ ಲೈನ್ ೧೦೯೮ ನೋಡಲ್ ಸಂಸ್ಥೆಯ ಸ್ಕೂಲ್ ಆಫ್ ಸೋಸಿಯಲ್ ವಕ್ ರೋಶನಿ ನಿಲಯದಲ್ಲಿ ಸಿಸ್ಟರ್ ಜ್ಯೂಲಿಯೆಟ್ ಕಳೆದ ಎಪ್ರಿಲ್ 2019 ರಿಂದ ಸೆಪ್ಟಂಬರ್ 2020 ರವರೆಗೆ ಒಟ್ಟು ೧೧೫೫ ಕರೆಗಳನ್ನು ಚೈಲ್ಡ್ ಲೈನ್ ಮೂಲಕ ಸ್ವೀಕರಿಸಲಾಗಿದ್ದು ಮಕ್ಕಳಿಗೆ ರಕ್ಷಣೆಯನ್ನು ಕೊಡಲು ಸಹಾಯವಾಗಿದೆ ಎಂದು ತಿಳಿಸಿದರು. ಕಾರ್‍ಯ ಕ್ರಮದ ಮಹತ್ವವನ್ನು ಹೇಳಿದರು.ಈ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ ಚೈಲ್ಡ್ ಲೈನ್ ಮಂಗಳೂರು ಕೊಲ್ಯಾಬ್ ನಿರ್ದೇಶಕರು ಶ್ರೀಯುತ ರೆನ್ನಿ ಡಿ ಸೋಜ ಇವರು ಚೈಲ್ಡ್ ಲೈನ್ ಸೆ ದೋಸ್ತಿ ವೀಕ್ 7 ದಿನದ ಕಾರ್ರ್‍ಅ ಕ್ರಮದ ಬಗ್ಗೆ ಮಾದ್ಯಮಗಳಲ್ಲಿ ಚೈಲ್ಡ್ ಲೈನ್ ಸೆ ದೋಸ್ತಿ ಮಾಹಿತಿಯ ಪ್ರಚಾರ, ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳ ಕಾರ್ಯಕ್ರಮದ ಕುರಿತು ಚಿತ್ರರಚನೆ, ಬಾಲಭಿಕ್ಷಾಟನೆಯ ಕುರಿತು ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ(ವಾಹನದಲ್ಲಿ ಧ್ವನಿವರ್ಧಕದ ಮೂಕ ಪ್ರಚಾರ, ಬಾಲಕಾರ್ಮಿಕ ಭಿಕ್ಷಾಟನೆಯ ಇಲಾಖಾ ಅಧಿಕಾರಿಗಳೊಂದಿಗೆ ಜನಜಾಗೃತಿ ಕಾರ್ಯಕ್ರಮ, ವಿಶ್ವ ಮಕ್ಕಳ ದೌರ್ಜನ್ಯ ತಡೆ ದಿನ ಕುರಿತು ವೆಬಿನಾರ್ ಕಾರ್ಯಕ್ರಮ, ಚೈಲ್ಡ್ ಲೈನ್ ಸೆ ದೋಸ್ತಿ ವೀಕ್ ಕಾರ್ಯ ಕ್ರಮದ ಸಮಾರೋಪ ಸಮಾರಂಭದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಲಯನ್ ಪ್ರಜ್ವಲ ಶೆಟಿ ಅಧ್ಯಕ್ಷರು ಲಯನ್ಸ್ ಕ್ಲಬ್ ಆಶೋಕ ನಗರ ಕಾರ್‍ಯ ಕ್ರಮಕ್ಕೆ ಶುಭಹಾರೈಸಿದರು. ಸ್ಕೂಲ್ ಆಫ್ ಸೋಸಿಯಲ್ ವಕ್ ರೋಶನಿ ನಿಲಯದ ಸಮಾಜ ಕಾರ್‍ಯ ವಿಭಾಗದ ವಿದ್ಯಾರ್ಧಿಗಳು ತಯಾರಿಸಿದ ಮಕ್ಕಳ ಸಮಸ್ಯೆಗಳ ಬಗ್ಗೆ ಕಿರು ಚಿತ್ರಣವನ್ನು ಪ್ರದರ್ಶಿಸಲಾಯಿತು. ಈ ಕಾರ್‍ಯ ಕ್ರಮದಲ್ಲಿ ಸಿಸ್ಟರ್ ಹಿಲರಿಯಾ ಚೈಲ್ಡ್ ಲೈನ್ ನಗರ ಸಂಯೋಜಕರು. ಸ್ವಾಗತಿಸಿ,ಶ್ರೀಮತಿ ಶಖಿಲಾ ನರೇಶ್ ಚೈಲ್ಡ್ ಲೈನ್ ಆಪ್ತಸಮಾಲೋಚಕರು,ಹಾಗೂ ಸಿಸ್ಟರ್ ಪ್ರಿಯ ಕಾರ್‍ಯ ಕ್ರಮದ ನಿರೂಪಣೆಯನ್ನು ಮಾಡಿದರು.ಶ್ರೀಮತಿ ಜಯಂತಿ ಸದಸ್ಯರು ಚೈಲ್ಡ್ ಲೈನ್ ಕಾರ್ಯಕ್ರಮದ ವಂದಾರ್ನಾಪಣೆಯನ್ನು ಮಾಡಿದರು.ಈ ಕಾರ್‍ಯ ಕ್ರಮವು ಲಯನ್ಸ್ ಕ್ಲಬ್ ಆಶೋಕನಗರ ಸಹಭಾಗಿತ್ವದಲ್ಲಿ ನಡೆಯಿತು. ಚೈಲ್ಡ್ ಲೈನ್ ಸದಸ್ಯರಾದ ಶ್ರೀಮತಿ ರೇವತಿ,ಪಡಿ ಸಂಸ್ಥೆಯ ವಕಾಲತ್ತು ಸಂಯೋಜನಾಧಿಕಾರಿ ಡೆನ್ನಿಸ್ ಡಿ ಸೋಜ , ರಂಜಿತ್ ಕಾಡುತೋಟ ಸಹಕರಿಸಿದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments