Sunday, September 24, 2023
Homeಕರಾವಳಿಮನೆಗಳಲ್ಲಿಯೇ ಸರಳವಾಗಿ ನವರಾತ್ರಿ ಆಚರಿಸಿ : ವೀರೇಂದ್ರ ಹೆಗ್ಗಡೆ

ಮನೆಗಳಲ್ಲಿಯೇ ಸರಳವಾಗಿ ನವರಾತ್ರಿ ಆಚರಿಸಿ : ವೀರೇಂದ್ರ ಹೆಗ್ಗಡೆ

ಮನೆಗಳಲ್ಲಿಯೇ ಸರಳವಾಗಿ ನವರಾತ್ರಿ ಆಚರಿಸಿ : ವೀರೇಂದ್ರ ಹೆಗ್ಗಡೆ

- Advertisement -



Renault

Renault
Renault

- Advertisement -

ಬೆಳ್ತಂಗಡಿ: ಈಗಾಗಲೇ ಸರ್ಕಾರ ಸೂಚಿಸಿದ ಮಾರ್ಗಸೂಚಿ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು, ನವರಾತ್ರಿ ಉತ್ಸವದ ಮೂಲಕ ಕೊರೊನಾ ಅಸುರನನ್ನು ದೂರ ಇಡಬೇಕಾದರೆ ಎಲ್ಲರೂ ಈ ಬಾರಿ ತಮ್ಮ ಮನೆಗಳಲ್ಲಿಯೇ ಸರಳವಾಗಿ ನವರಾತ್ರಿ ಪೂಜೆ ಮತ್ತು ಆಚರಣೆಗಳನ್ನು ನೆರವೇರಿಸಿ ಸಾರ್ವಜನಿಕವಾಗಿ ಜನರು ಒಟ್ಟು ಸೇರುವುದನ್ನು ತಡೆಗಟ್ಟಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸಲಹೆ ನೀಡಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಿಂದ ಕೊರೊನಾ ವ್ಯಾಧಿ ಜನ ಜೀವನದಲ್ಲಿ ಹೊಕ್ಕಿ ಸಾಕಷ್ಟು ಸಮಸ್ಯೆಗಳನ್ನು ಮತ್ತು ವ್ಯತ್ಯಾಸಗಳನ್ನು ಉಂಟುಮಾಡಿದೆ. ಅಕ್ಟೋಬರ್ ಮಧ್ಯದವರೆಗೂ ರೋಗ ಹೇಗೆ ಹರಡುತ್ತದೆ? ಮತ್ತು ಅದಕ್ಕೆ ಸೂಕ್ತ ಔಷಧಿ ಏನು? ಇದು ಹೇಗೆ ಕೊನೆಗೊಳ್ಳುತ್ತದೆ? ಎಂಬ ಬಗ್ಗೆ ಖಚಿತ ಪರಿಹಾರವಿಲ್ಲ. ಎಲ್ಲವೂ ಯಕ್ಷ ಪ್ರಶ್ನೆಯಾಗಿದೆ. ಆದುದರಿಂದ ಹಬ್ಬಗಳ ಮೂಲಕ ಭಕ್ತಿ, ಶ್ರದ್ಧೆ ಮತ್ತು ಆಚರಣೆಗಳು ಇರಬೇಕಾಗುತ್ತದೆ. ಎಲ್ಲರೂ ಸರಳವಾಗಿ ನವರಾತ್ರಿ ಆಚರಿಸೋಣ ಎಂದು ಕರೆ ನೀಡಿದ್ದಾರೆ.

ದುಷ್ಟ ಶಕ್ತಿಗಳ ನಿವಾರಣೆಯೇ ನವರಾತ್ರಿ ಉತ್ಸವದ ಉದ್ದೇಶವಾದುದರಿಂದ, ಕೊರೊನಾ ರೋಗ ಆದಷ್ಟು ಶೀಘ್ರ ಸಂಪೂರ್ಣ ನಿರ್ಮೂಲನೆಯಾಗಿ ಎಲ್ಲರೂ ಆರೋಗ್ಯ ಭಾಗ್ಯದೊಂದಿಗೆ ಶಾಂತಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಹೆಗ್ಗಡೆ ಹಾರೈಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments