Sunday, May 28, 2023
Homeಕರಾವಳಿಮಾಜಿ ಪ್ರಿಯಕರ ನ ಬ್ಲಾಕ್ ಮೇಲ್ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ

ಮಾಜಿ ಪ್ರಿಯಕರ ನ ಬ್ಲಾಕ್ ಮೇಲ್ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ

- Advertisement -


Renault

Renault
Renault

- Advertisement -

ಪುತ್ತೂರು: ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದ ಯುವತಿವೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ಸಂಪ್ಯದಲ್ಲಿ ನಡೆದಿದೆ.

ಮಧುಶ್ರೀ(26) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.

ನಿನ್ನೆ ಮಧ್ಯಾಹ್ನ ತನ್ನ ಅಜ್ಜಿ ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದಾಗಲೇ ಬೇರೆ ಮದುವೆಯಾಗಿರುವ ಆಕೆಯ ಮಾಜಿ ಪ್ರಿಯಕರ ಆಕೆಗೆ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆಯಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಡೈರಿಯಲ್ಲಿ ಬರೆದಿದ್ದಾಳೆ.

ಮಧುಶ್ರೀ, ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ಬಾಲಕೃಷ್ಣ ಗೌಡರ ಪುತ್ರಿಯಾಗಿದ್ದು, ಕಳೆದ ನಾಲ್ಕು ವರ್ಷದಿಂದ ಪುತ್ತೂರಿನ ಖಾಸಗಿ ಅಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆಯ ಹಾಸ್ಟೆಲ್ ನಲ್ಲಿಯೇ ತಂಗಿದ್ದ ಈಕೆ ಆಗಾಗ ಅಜ್ಜಿ ಮನೆಗೆ ತೆರಳುತ್ತಿದ್ದಳು. ಇದೀಗ ಅಜ್ಜಿ ಮನೆಯ ಪಕ್ಕದ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಈಕೆಯ ಆತ್ಮಹತ್ಯೆಗೆ ದೇವಿಕಿರಣ್ ಎಂಬ ವಿವಾಹಿತನೊಬ್ಬ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಮಧುಶ್ರೀ ತನ್ನ ಬ್ಯಾಗ್ ನಲ್ಲಿದ್ದ ಡೈರಿಯಲ್ಲಿ ಬರೆದುಕೊಂಡಿದ್ದಾಳೆ ಎನ್ನಲಾಗ್ತಿದೆ. ‘ನಾನು ಹಾಗೂ ಸಂಪಾಜೆಯ ದೇವಿಚರಣ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಆದರೆ, ಕಳೆದ ಜೂನ್ ನಲ್ಲಿ ಆತನಿಗೆ ಬೇರೊಂದು ಯುವತಿಯೊಂದಿಗೆ ವಿವಾಹವಾಗಿತ್ತು. ಹೀಗಿದ್ದರೂ ಆತ ನನ್ನ ಜೊತೆ ಸಂಪರ್ಕದಲ್ಲಿದ್ದ. ನನಗೆ ಬೇರೆಯವರನ್ನು ಮದುವೆಯಾಗದಂತೆ ಒತ್ತಾಯ ಮಾಡುತ್ತಿದ್ದ. ಮದುವೆಯಾಗಲು ಪ್ರಯತ್ನಿಸಿದರೆ ನನಗೂ-ನಿನಗೂ ಸಂಬಂಧವಿದೆ ಎಂದು ಯುವಕನಿಗೆ ತಿಳಿಸಿ ಮದುವೆ ತಪ್ಪಿಸುವುದಾಗಿ ಬೆದರಿಸಿದ್ದ. ಅಂತೂ ಒಂದು ವೇಳೆ ಮದುವೆಯಾದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕುತ್ತಿದ್ದ’ ಎಂದು ಆಕೆ ಡೈರಿಯಲ್ಲಿ ಬರೆದುಕೊಂಡಿದ್ದಾರೆ.

ಆತ ನೀಡುತ್ತಿದ್ದ ಕಿರುಕುಳದ ಬಗ್ಗೆ ಮಧುಶ್ರೀ ಮನೆಯವರ ಬಳಿ ಕೂಡ ಹೇಳಿಕೊಂಡಿದ್ದರು ಎನ್ನಲಾಗಿದೆ. ನಿನ್ನೆ ಕೂಡ ಆಕೆ ಈ ವಿಚಾರವನ್ನು ಅಜ್ಜಿ ಮನೆಯಲ್ಲಿ ತಿಳಿಸಿದ್ದು ಅವರೂ ಸಮಾಧಾನ ಪಡಿಸಿದ್ದರು ಎನ್ನಲಾಗ್ತಿದೆ.

ಮಧುಶ್ರೀ ಆತ್ಮಹತ್ಯೆಗೆ ದೇವಿಚರಣ್ ಕಿರುಕುಳವೇ ಕಾರಣ ಎಂದು ಮಧುಶ್ರೀ ಮಾವ ವಿಠಲ್ ಗೌಡ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments