ಬಂಟ್ವಾಳ : ಮೆಲ್ಕಾರ್‌ನಲ್ಲಿ ಶುಕ್ರವಾರ ರಾತ್ರಿ ರೌಡಿ ಶೀಟರ್ ಉಮರ್ ಫಾರೂಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಗುಂಡ್ಯದಲ್ಲಿ ಪೊಲೀಸರು ಗುಂಡು ಹಾರಿಸಿ ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ.
ಆರೋಪಿ ಖಲೀಲ್ ಮತ್ತು ಆತನ ಜೊತೆ ಇಬ್ಬರು ಆರೋಪಿಗಳು ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾಹಿತಿ ಆಧಾರಿಸಿ ಅವರನ್ನು ಬಂಟ್ವಾಳದಿಂದ ಬೆನ್ನಟ್ಟಿ ಬಂಧಿಸಲು ಹೋದಾಗ ಗುಂಡ್ಯ ತಲುಪಿದಂತೆ ಖಲೀಲ್ ಪೋಲೀಸರು ಮೇಲೆ ತಲವಾರು ದಾಳಿ ನಡೆಸಿದ್ದಾನೆ. ಆ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ಅವರಿಗೆ ಹಾಗೂ ಕೊಲೆ ಆರೋಪಿ ಖಲೀಲ್‌ಗೆ ಗಾಯವಾಗಿದ್ದು ಇಬ್ಬರನ್ನು ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಕೊಲೆ ಆರೋಪಿಗಳ ಪತ್ತೆಗೆ ಎಸ್.ಪಿ. ಲಕ್ಮೀಪ್ರಸಾದ್ ವಿಶೇಷ ತಂಡ ರಚನೆ ಮಾಡಿದ್ದರು. ಆ ಹಿನ್ನಲೆಯಲ್ಲಿ ನಟೋರಿಯಸ್ ಆರೋಪಿಗಳ ಬಂಧನಕ್ಕೆ ಎಸ್.ಐ.ಅವಿನಾಶ್ ಹಾಗೂ ಪ್ರಸನ್ನ ಆರೋಪಿಗಳ ಪತ್ತೆಗೆ ಮುಂದಾದ ವೇಳೆ ಪೋಲೀಸರ ಮೇಲೆ ದಾಳಿ ಗೆ ಮುಂದಾಗಿದ್ದ ಆರೋಪಿಗಳಿಗೆ ಗುಂಡಿನ ದಾಳಿ ನಡೆಸಿ ಬಂಧನ ನಡೆಸಿದ್ದಾರೆ.
ಆ ವೇಳೆ ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಗುಡ್ಡೆಗೆ ಓಡಿ ಹೋಗಿ ತಪ್ಪಿಸಿ ಕೊಂಡಿದ್ದಾರೆ. ಉಪ್ಪಿನಂಗಡಿ ಎಸ್.ಐ.ಈರಯ್ಯ ಈತನ ಬಂಧನಕ್ಕೆ ಮುಂದಾಗಿದ್ದಾರೆ.
ಖಲೀಲ್ ಖತರ್ನಾಕ್ ಆಗಿದ್ದು ಕೋಮು ಗಲಭೆ ಸಹಿತ ಆನೇಕ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು ಕಲ್ಲಡ್ಕದಲ್ಲಿ ಉಂಟಾಗುತ್ತಿದ್ದ ಗಲಾಟೆಗೆ ಈತ ಪ್ರಮುಖನಾಗಿದ್ದ. ಈತನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು ಇತ್ತೀಚಿಗೆ ಈತನ ಗಡಿಪಾರು ಕೂಡ ಆಗಿತ್ತು. ಕಲ್ಲಡ್ಕ ಇತ್ತೀಚಿಗೆ ನಡೆದ ರತ್ನಾಕರ ಶೆಟ್ಟಿಯವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಈತನ ಗಡಿಪಾರು ನಡೆದಿತ್ತು.