Wednesday, May 31, 2023
Homeಕರಾವಳಿಮೈಸೂರು ದಸರಾ- ರಾಜಮನೆತನದ ಖಾಸಗಿ ದರ್ಬಾರ್ ಆರಂಭ

ಮೈಸೂರು ದಸರಾ- ರಾಜಮನೆತನದ ಖಾಸಗಿ ದರ್ಬಾರ್ ಆರಂಭ

- Advertisement -


Renault

Renault
Renault

- Advertisement -

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ರಾಜಮನೆತನದ ಖಾಸಗಿ ದರ್ಬಾರ್ ಇಂದು ಆರಂಭವಾಯಿತು. ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ರಾಜಮನೆತನದ ಖಾಸಗಿ ದಸರಾ ಕೂಡ ಸರಳ ಮತ್ತು ಸಾಂಪ್ರದಾಯಿಕವಾಗಿತ್ತು.

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಅರಮನೆಯ ಒಳಗೆ ಹೋಮ ಹವನಗಳು ನಡೆದವು. ಬೆಳಿಗ್ಗೆ 6 ಗಂಟೆ 15 ನಿಮಿಷದಿಂದ 6 ಗಂಟೆ 30 ನಿಮಿಷದೊಳಗೆ ಸಲ್ಲುವ ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ಸಿಂಹವನ್ನು ಜೋಡಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಳಿಗ್ಗೆ 7 ಗಂಟೆ 45 ನಿಮಿಷದಿಂದ 8 ಗಂಟೆ 15 ನಿಮಿಷದೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣಧಾರಣೆ ಮಾಡಲಾಯಿತು. ಬಳಿಕ ಹಲವು ಖಾಸಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹತ್ತು ಗಂಟೆಗೆ ಖಾಸಗಿ ದರ್ಬಾರ್ ಕೂಡ ನೆರವೇರಿತು. ಜಯಘೋಷದ ಹಿಮ್ಮೇಳದೊಂದಿಗೆ ಯದುವೀರ್ ಅವರು ಸಿಂಹಾಸನದಲ್ಲಿ ಕುಳಿತರು. ರತ್ನಖಚಿತ ಸಿಂಹಾಸನವೇರಿದ ಮಹಾರಾಜ ಯದುವೀರ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಇದೇ ರೀತಿ ಪ್ರತಿದಿನವೂ ದಸರಾ ಜಂಬೂ ಸವಾರಿ ದಿನದ ತನಕ ಖಾಸಗಿ ದರ್ಬಾರ್ ನಡೆಯಲಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments