- Advertisement -
ಮಂಗಳೂರು : ಕಂದಾವರ ಮಸೀದಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಯುನಿಟಿ ಆಸ್ಪತ್ರೆ ಸಮೀಪ ಯುವಕನ ಮೇಲೆ ತಲವಾರು ದಾಳಿ ನಡೆದಿದೆ.
ಸೋಮವಾರ ರಾತ್ರಿ ಈ ದಾಳಿ ನಡೆದಿದ್ದು, ನೌಶಾದ್ (30) ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕಂದಾವರ ಮಸೀದಿ ಸಮೀಪ ಚೂರಿ ಇರಿತಕ್ಕೊಳಗಾಗಿದ್ದ ಅಬ್ದುಲ್ ಅಝೀಝ್ ಅವರ ಅಳಿಯ ನೌಶಾದ್ ಅವರ ಮೇಲೆ ತಲವಾರಿನಿಂದ ದಾಳಿ ಮಾಡಲಾಗಿದೆ. ಅವರ ಎದೆ ಭಾಗಕ್ಕೆ ಗಾಯವಾಗಿದ್ದು, ಕಾರಿನಲ್ಲಿ ಬಂದಿದ್ದ ತಂಡ ಈ ದಾಳಿ ನಡೆಸಿರುವುದಾಗಿ ಹೇಳಲಾಗುತ್ತಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
