ಮಂಗಳೂರು: ಹಿರಿಯ ನಟ, ರಂಗನಟ, ನಿರ್ದೇಶಕ, ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಮೊಕ್ತೇಸರ ಮಾಧವ ಜಪ್ಪು ಪಟ್ನ ಅವರು ಗುರುವಾರ ಬೆಳಗ್ಗಿನ ಜಾವ 3.30 ಗಂಟೆಗೆ ನಿಧನರಾದರು.
ಮಾಧವ ಜಪ್ಪು ಪಟ್ನ ಅವರು ಹಿರಿಯ ಚಲನಚಿತ್ರ ನಟರಾಗಿದ್ದು ಹಲವಾರು ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸಿದ್ದಾರೆ. ತುಳು ರಂಗ ಭೂಮಿಯ ಹಿರಿಯ ಕಲಾವಿದರಾಗಿರುವ ಅವರು ಅಸಂಖ್ಯ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ.
ಮಾಧವ ಜಪ್ಪು ಪಟ್ಲ ಅವರು ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು, ಬಿರುದುಗಳಿಗೆ ಭಾಜನರಾಗಿದ್ದಾರೆ. ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಮೊಕ್ತೇಸರಾಗಿದ್ದ ಅವರು, ನವನಿಧಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರು ಕೂಡಾ ಆಗಿದ್ದರು.
ಮಾಧವ ಜಪು ಪಟ್ನ ಅವರು 8 ನಾಟಕಗಳನ್ನು ರಚಿಸಿದ್ದು ಪೆದ್ದ ಗುಂಡೆ, ಪೂರಾ ಡೋಂಗಿಲು, ಈ ಬಲ್ಲ್ ಯಾವ, ಪೊರ್ಲುಗು ಮಾರ್ಲಾಂಡ, ಸಜ್ಜಿಗೆ ಬಜಿಲ್, ಅಂಡೆ ಪಿರ್ಕಿಲು, ಬಂಗಾರ್ ಕಂಡನಿ, ಲೆಕ್ಕತತ್ತುಂಡ್, ಪ್ರಮುಖ ನಾಟಕಗಳು.
ಮೃತರು ಪತ್ನಿ ಇಬ್ಬರು ಮಕ್ಕಳು, ಸೊಸೆ , ಇಬ್ಬರು ಅಣ್ಣಂದಿರು, ಓರ್ವ ತಮ್ಮ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ
ಮೃತರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ನಂದಿ ಗುಡ್ಡೆ ರುದ್ರ ಭೂಮಿಯಲ್ಲಿ ನಡೆಯಿತು.