ಕಾಸರಗೋಡು : ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯ ಗಳಿಸಿದ ಯುಡಿಎಫ್ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದು, ಬದಿಯಡ್ಕ ಠಾಣಾ ಎಸ್ ಐ ಸೇರಿದಂತೆ ಹಲವು ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಡಿಸೆಂಬರ್ 17ರ ಗುರುವಾರ ಸಂಜೆ ಬದಿಯಡ್ಕದಲ್ಲಿ ನಡೆದಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ಯುಡಿಎಫ್ ವತಿಯಿಂದ ಬದಿಯಡ್ಕದಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮೆರವಣಿಗೆ ತೆರಳುತ್ತಿದ್ದವರ ಮೇಲೆ ಕಲ್ಲು ಹಾಗೂ ಇತರ ವಸ್ತುಗಳನ್ನು ಎಸೆಯಲಾಗಿದೆ ಎಂದು ತಿಳಿದುಬಂದಿದೆ. ಕೃತ್ಯದ ಹಿಂದೆ ಸಿಪಿಎಂ ಕಾರ್ಯಕರ್ತರ ಕೈವಾಡವಿದೆ ಎಂಬುವುದಾಗಿ ಯುಡಿಎಫ್ ಆರೋಪ ಮಾಡಿದೆ.
ಮೆರವಣಿಗೆ ಸಂದರ್ಭದಲ್ಲಿ ಸಿಪಿಎಂ ಕಚೇರಿ ಮೇಲೆ ಪಟಾಕಿ ಎಸೆಯಲಾಗಿದೆ. ಇದರಿಂದಾಗಿ ಬ್ಯಾನರ್ ಗಳಿಗೆ ಹಾನಿಯಾಗಿದೆ ಎಂದು ಸಿಪಿಎಂ ಆರೋಪ ಮಾಡಿದೆ.
ಇನ್ನೊಂದು ಕಡೆ ಭಾರತೀಯ ಜನತಾ ಪಕ್ಷ ಮಂಜೇಶ್ವರ ಪಂಚಾಯತ್ ಕಮಿಟಿ ವತಿಯಿಂದ ಮಂಜೇಶ್ವರ ಗ್ರಾಮ ಪಂಚಾಯತಿನ 12ನೆ ವಾರ್ಡು ವಾಮಂಜೂರು ಗುಡ್ಡೆಯಲ್ಲಿ ಚುನಾವಣಾ ವಿಜಯೋತ್ಸವ ಆಚರಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಎಸ್ ಡಿ ಪಿ ಐ ಗೂಂಡಾಗಳು ನಡೆಸಿದಂಥ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆಯನ್ನು ನಾಳೆ ಸಂಜೆ 5ಗಂಟೆಗೆ ಸರಿಯಾಗಿ ಶಾಂತಿನಗರ ಕಾಲೊನಿಯಿಂದ ಹೊಸಂಗಡಿಗೆ ನಡೆಸಲು ಬಿಜೆಪಿ ತೀರ್ಮಾನಿದೆ