Monday, September 26, 2022
Homeಕರಾವಳಿವಿಟ್ಲ ಪರಿಸರದಲ್ಲಿ ಆರು ಮಂದಿಗೆ ಹುಚ್ಚು ನಾಯಿ ಕಡಿತ

ವಿಟ್ಲ ಪರಿಸರದಲ್ಲಿ ಆರು ಮಂದಿಗೆ ಹುಚ್ಚು ನಾಯಿ ಕಡಿತ

- Advertisement -
Renault

Renault

Renault

Renault


- Advertisement -

ಬಂಟ್ವಾಳ :  ಹುಚ್ಚು ನಾಯಿಯೊಂದು ಮಕ್ಕಳ ಸಹಿತ ಒಟ್ಟು ಆರು ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಶುಕ್ರವಾರ ವಿಟ್ಲ ಪರಿಸರದಲ್ಲಿ ನಡೆದಿದೆ.

ಚಂದಳಿಕೆ ನಿವಾಸಿ ಅಹರಾಝ್ (6), ಬೊಬ್ಬೆಕೇರಿ ನಿವಾಸಿ ಮೌಸೀಫ್(16), ಇರಾ ನಿವಾಸಿ ಮುಸ್ತಫಾ(31), ವಿಟ್ಲ ಕಸಬಾ ನಿವಾಸಿ ಅನಿರುದ್ಧು(22), ಕಡಂಬು ನಿವಾಸಿ ರಾಧಾಕೃಷ್ಣ(52), ಅಳಿಕೆ ನಿವಾಸಿ ಭಾಸ್ಕರ್(49) ಎಂಬವರು ನಾಯಿ ಕಡಿತದಿಂದ ಗಾಯಗೊಂಡು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆರು ಮಂದಿಯಲ್ಲಿ ಇಬ್ಬರಿಗೆ ಗಂಭೀರ ಗಾಯಗೊಂಡಿದ್ದು ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಣ್ಣಮಟ್ಟದ ಗಾಯ ಗೊಂಡವರು ವಿಟ್ಲದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ವಿಟ್ಲ ದೇವಸ್ಥಾನ ರಸ್ತೆಯಿಂದ ಬೊಬ್ಬೆಕೇರಿ ಮೂಲಕ ಬಂದ ಹುಚ್ಚು ನಾಯಿ ಪೇಟೆವರೆಗೆ ಓಡಾಡಿ ದಾರಿಯಲ್ಲಿ ಸಿಕ್ಕಿದವರಿಗೆಲ್ಲ ಕಚ್ಚಿ ಗಾಯ ಗೊಳಿಸಿದೆ. ತಕ್ಷಣವೇ ಕಾರ್ಯಾಚರಣೆಗೆ ಇಳಿದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರ ತಂಡ ಹುಚ್ಚು ನಾಯಿಯನ್ನು ಹಿಡಿಯುವಲ್ಲಿ ಯಶಸ್ವಿಯಾ ಗಿದೆ. ಇನ್ನೂ ಅನೇಕ ಬೀದಿ ನಾಯಿಗಳಿಗೆ ಇದು ಕಚ್ಚಿದ್ದು ಜನರಲ್ಲಿ ಆತಂಕ ನೆಲೆ ಮಾಡಿದೆ. 

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments