Wednesday, May 31, 2023
Homeಕರಾವಳಿವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂಬುದು ಜಾತಿ ರಾಜಕಾರಣವಲ್ಲ : ಹರೀಶ್ ಕುಮಾರ್

ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂಬುದು ಜಾತಿ ರಾಜಕಾರಣವಲ್ಲ : ಹರೀಶ್ ಕುಮಾರ್

- Advertisement -


Renault

Renault
Renault

- Advertisement -

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷ ಇಟ್ಟಿತ್ತು. ಮಳವೂರು ಗ್ರಾಪಂನಲ್ಲಿ ಅದರ ಬಗ್ಗೆ ನಿರ್ಣಯ ಕೈಗೊಂಡು ದ.ಕ.ಜಿಪಂಗೆ ಕಳುಹಿಸಿಕೊಡಲಾಗಿತ್ತು. ಜಿಪಂನಿಂದ‌ ಆ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು.

ಇದೀಗ ರಾಜ್ಯ ಸರ್ಕಾರ ಈ ಬೇಡಿಕೆಯನ್ನು ಅಂಗೀಕರಿಸದೆ ದ.ಕ.ಜಿಲ್ಲಾಧಿಕಾರಿಯವರಿಗೆ ಸುತ್ತೋಲೆಯೊಂದನ್ನು‌ ಕಳುಹಿಸಿದೆ. ಅದರಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಹಾಗೂ ಕಾರ್ಯಾಚರಣೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯಾಪ್ತಿಗೆ ಬರುವುದರಿಂದ ಮರುನಾಮಕರಣವು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿಲ್ಲ ಎಂದು ತಿಳಿಸಿದೆ.

ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಅವರು ಈ ಬಗ್ಗೆ 8 ವರ್ಷಗಳ ಹಿಂದೆಯೇ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ. ಇದಕ್ಕೆ ಅವರು ದಾಖಲೆ ನೀಡಲಿ. ಹಾಗೆಯೇ ಈ ಎಂಟು ವರ್ಷಗಳಲ್ಲಿ ಈ ಪ್ರಸ್ತಾವನೆ ಏನಾಗಿದೆ ಎಂಬುದಕ್ಕೆ ಕಾರಣ ನೀಡಲಿ. ಅದು ಮತ್ತೊಂದು ಪಂಪ್ ವೆಲ್ ಫ್ಲೈಓವರ್ ರೀತಿ ನನೆಗುದಿಗೆ ಬೀಳೋದು ಬೇಡ ಎಂದು ಹರೀಶ್ ಕುಮಾರ್ ಹೇಳಿದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments