ಮಂಗಳೂರು: ಕರಾವಳಿಯ ಮುಂಚೂಣಿ ಸಮುದಾಯವಾದ ಬಂಟ ಸಮುದಾಯದ ಹಾಗೂ ಬಂಟರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಆಶಾಜ್ಯೋತಿ ರೈ ಆವರ ಎರಡನೇ ಪುತ್ರಿಯ ವಿವಾಹ ಕರಾವಳಿಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಅಂತರ್ ಧರ್ಮದ ವಿವಾಹವಾಗಿರುವ ಕೆಲ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿವೆ. ಕಾರಣ ಇಷ್ಟೇ ಬಂಟ ಸಮುದಾಯದ ಅಧ್ಯಕ್ಷರಾಗಿರುವ ಅಜಿತ್ ಕುಮಾರ್ ರೈ ಅದೆಷ್ಟೋ ಬಂಟರ ಸಭೆಯಲ್ಲಿ ನಮ್ಮ ಸಮುದಾಯದವರು ಆ ರೀತಿ ಇರಬೇಕು ಈ ರೀತಿ ಇರಬೇಕು ಎಂದು ಭಾಷಣ ಬಿಗಿಯುತ್ತಿದ್ದವರ ಮನೆ ಮಗಳೇ ಅಂತರ್ ಧರ್ಮದ ವಿವಾಹವಾಗೋ ಮೂಲಕ ಸದ್ದಿಲ್ಲದೆ ಸುದ್ದಿಯಾಗಿದ್ದಾರೆ. ಇವೆಷ್ಟೇ ಅಲ್ಲ ಆಶಾಜ್ಯೋತಿ ರೈ ಪರಿವಾರ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಜಿಲ್ಲೆಯ ಕೆಲ ದೇವಸ್ಥಾನಗಳ ಬ್ರಹ್ಮಕಲಶೋತ್ಸವದಲ್ಲಿ ಇವರು ಸಕ್ರೀಯವಾಗಿ ತೊಡಗಿಸಿಕೊಂಡವರು. ಇದೀಗ ಇಂತಹ ಮನೆ ಮಗಳ ಹಾದಿಯೇ ತಪ್ಪಿ ಹೋಯ್ತಾ ಎಂಬ ಪ್ರಶ್ನೆಯನ್ನ ಬಂಟ ಸಮುದಾಯ ಕೇಳ್ತಿದೆ.
ಅಷ್ಟಕ್ಕೂ ಅಜಿತ್ ಕುಮಾರ್ ರೈ ಇವರ ಮನೆತನ ಎಂತದ್ದು ಗೊತ್ತಾ…? ಇವರ ಮನೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿತ್ತು. ಸಾಮಾನ್ಯರೆಲ್ಲರಿಗೂ ತಿರುಪತಿಯಲ್ಲಿ ನಡೆಯುವ ಕಲ್ಯಾಣೋತ್ಸವವವನ್ನು ದರ್ಶಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶ್ರೀನಿವಾಸನ ಕಲ್ಯಾಣೋತ್ಸವವನ್ನು ದರ್ಶಿಸಲು ಲ್ಲರಿಗೂ ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿದ್ದರು. ಇದಕ್ಕೆ ತಿರುಪತಿ ದೇವಸ್ಥಾನದ ಸಹಯೋಗವೂ ಇರುತ್ತದೆ. ಇನ್ನು ತಿರುಪತಿ ಕಲ್ಯಾಣ ಎಂದರೆ ಮಂಗಳ. ಭಗವಂತನ ಕಲ್ಯಾಣ ಎಂದರೆ ಜಗತ್ತಿಗೆ ಮಂಗಳ. ಭಗವಂತನ ವಿವಾಹವನ್ನು ಕಲ್ಯಾಣೋತ್ಸವ ಎಂದು ಕರೆಯುತ್ತಾರೆ. ಶ್ರೀನಿವಾಸ ದೇವರಿಗೆ ಪದ್ಮಾವತಿಯೊಂದಗೆ ತಿರುಮಲದಲ್ಲಿ ಕಲ್ಯಾಣೋತ್ಸವ ನಡೆಯುತ್ತದೆ. ಅದ್ರೆ ಇಷ್ಟೆಲ್ಲ ಸಂಸ್ಕಾರ, ಸಂಸ್ಕೃತಿಯುಳ್ಳ, ಹಿಂದೂ ಸಮಾಜದಲ್ಲಿ ಮುಂಚೂಣಿಯಲ್ಲಿದ್ದ ಮನೆ ಮಗಳು ಇದೀಗ ಬ್ರಿಟೀಷರ ಸೊಸೆಯಾಗಿದ್ದಾರೆ. ಶ್ರೀನಿವಾಸ ಕಲ್ಯಾಣೋತ್ಸವ ನಡೆದ ಮನೆ ಮಗಳ ಮದುವೆ ಚರ್ಚ್ ನಲ್ಲಿ ನಡೆದಿದೆ.
1995 ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನ ದಲ್ಲಿ ಅಂತರ್ಜಾತಿ ವಿವಾಹಕ್ಕೆ ಸ್ವತಃ ಸಮ್ಮೇಳನಾಧ್ಯಕ್ಷರೇ ಕರೆ ಕೊಟ್ಟಿದ್ದರು. ಕೆಲ ಬಂಟ ಸಮುದಾಯದ ಅಧ್ಯಕ್ಷರೇ ಅಂತರ್ಜಾತಿ ವಿವಾಹವಾದ
ಉದಾಹರಣೆಯೂ ಇವೆ. ಇವಿಷ್ಟೇ ಯಾಕೇ ಬಂಟ ಸಮುದಾಯದ ಪ್ರಮುಖ ಆಕರ್ಷಣೆಗಳಾದ ಚಿತ್ರ ನಟನಟಿಯರು ಮದುವೆಯಾದದ್ದು ಎಲ್ಲಾ ಉತ್ತರಭಾರತೀಯರನ್ನೇ…. ಅಂತರ್ಜಾತಿಯ ವಿವಾಹವನ್ನು ಕರಾವಳಿಯ ಎಲ್ಲಾ ಸಮುದಾಯಗಳು ಒಪ್ಪಿಕೊಂಡಿದ್ದಾರೆ.
ಆದ್ರೆ ಕರಾವಳಿಯಂತ ಹಿಂದುತ್ವದ ಅಡ್ಡೆಯಲ್ಲಿ ಅಂತರ್ ಧರ್ಮದ ಮದುವೆಯನ್ನ ಯಾರೂ ಒಪ್ಪಿಕೊಳ್ಳಲಾರರೂ. ಅಂತದರಲ್ಲಿ ಇದೀಗ ಅಜಿತ್ ಕುಮಾರ್ ರೈ ಮಾಲಾಡಿಯವರ ಮಗಳು ಅಂತರ್ ಧರ್ಮದ ವಿವಾಹವಾಗೋ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ.
ಈ ನಡುವೆ ಕಳೆದ ಸೋಮವಾರವಷ್ಟೇ ಪ್ರತಿಷ್ಠಿತ ಬಂಟ ಸಮುದಾಯದ ‘ಗುತ್ತು’ಗೆ ಸಂಬಂಧಪಟ್ಟ ಧಾರ್ಮಿಕ ಕಾರ್ಯಕ್ರಮದ ವಿಧಿವಿಧಾನಗಳನ್ನು ಅಜಿತ್ ಕುಮಾರ್ ರೈ ಅವರೇ ನೆರವೇರಿಸಿದ್ದರು.
ಇನ್ನು ಗಣ್ಯಾತಿ ಗಣ್ಯರು ಮಂಗಳೂರಿಗೆ ಭೇಟಿ ನೀಡಿದಾಗ ಹೆಚ್ಚಾಗಿ ಅಜಿತ್ ಕುಮಾರ್ ರೈ ಅವರ ಮನೆಯಲ್ಲಿ ತಂಗುತ್ತಾರೆ. ಅಂತದರಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಕೂಡ ಒಬ್ಬರು. ಏನೇ ಆಗ್ಲೀ ಬಂಟ ಸಮುದಾಯದ ಅಧ್ಯಕ್ಷರ ಮಗಳೇ ಹಾದಿ ತಪ್ಪಿದ್ಲು. ನಮಗೆಲ್ಲ ಸಭೆಯಲ್ಲಿ ವೇದ ವಾಕ್ಯಗಳನ್ನ ಹೇಳ್ತಾ ಇದ್ರು. ಸಮುದಾಯ ಬಗ್ಗೆ ಹಾಗಲ್ಲ ಹೀಗೆ ಅಂತ ಅಡ್ಡ ದಾರಿ ಹಿಡಿದವರಿಗೆ ಸಂದೇಶ ನೀಡ್ತಾ ಇದ್ರು. ಆದ್ರೆ ಇದೀಗ ಅವರ ಮನೆ ಮಗಳೇ ಅಡ್ಡ ದಾರಿ ಹಿಡಿದು ಇಡೀ ಹಿಂದೂ, ಬಂಟ ಸಮಾಜ ತಲೆ ಕೆಳಗಾಗುವಂತೆ ಮಾಡಿದ್ದಾರೆ.