- Advertisement -
ಶಿವಮೊಗ್ಗ: ಸರಪಳಿಯಿಂದ ಕಟ್ಟಿಹಾಕಿದ್ದರಿಂದ ಅಸಾಹಯವಾಗಿ ನಿಂತ ಸಕ್ರೆಬೈಲು ಬಿಡಾರದ ಆನೆ ರಂಗ ಕಾಡಾನೆ ದಂತ ತಿವಿತದಿಂದ ಮೃತಪಟ್ಟಿದೆ.
35 ವರ್ಷದ ದೈತ್ಯ ಆನೆ ರಂಗ ಸಕ್ರೆಬೈಲು ಬಿಡಾರದ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡಾನೆಯೊಂದು ಏಕಾಏಕಿ ರಂಗ ಆನೆಯ ಮೇಲೆರಗಿದೆ. ಸರಪಳಿಯಿಂದ ಕಟ್ಟಿ ಹಾಕಿದ್ದರಿಂದ ಪ್ರತಿರೋಧ ತೋರಲಾಗದೆ ರಂಗ ಸುಮ್ಮನೆ ನಿಂತಿದೆ.
ಪ್ರತಿರೋಧ ತೋರದ ರಂಗನ ಮೇಲೆ ಕಾಡಾನೆ ಆಕ್ರೋಶಭರಿತವಾಗಿ ದಾಳಿ ಮಾಡಿದ್ದು ದಂತ ತಿವಿತಕ್ಕೆ ಬಲಿಯಾಗಿದೆ.
ರಂಗ ಆನೆ ದೈತ್ಯವಾಗಿದ್ದರಿಂದ ಎಲ್ಲರ ಗಮನ ಸೆಳೆಯುತ್ತಿತ್ತು.