Sunday, May 28, 2023
Homeರಾಜಕೀಯಸರಕಾರದಿಂದ ತಡೆಹಿಡಿಯಲಾಗಿದ್ದ ನೌಕರರ ರಜೆ ಸಂಬಳ ಪಾಸ್: ಸಿಎಂ ಸಿಹಿ ಸುದ್ದಿ

ಸರಕಾರದಿಂದ ತಡೆಹಿಡಿಯಲಾಗಿದ್ದ ನೌಕರರ ರಜೆ ಸಂಬಳ ಪಾಸ್: ಸಿಎಂ ಸಿಹಿ ಸುದ್ದಿ

- Advertisement -


Renault

Renault
Renault

- Advertisement -

ಬೆಂಗಳೂರು : ರಾಜ್ಯ ಸರಕಾರಿ ನೌಕರರಿಗೆ 2021ನೇ ಸಾಲಿನಲ್ಲಿ ನೌಕರರ ಗಳಿಕೆ ರಜೆಯ ನಗದೀಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಪ್ರಸ್ತುತ ವರ್ಷದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಸರಕಾರಿ ನೌಕರರ 15 ದಿನಗಳ ಗಳಿಕೆ ರಜೆಯನ್ನು ನಗದೀಕರಿಸುವ ಅವಕಾಶವನ್ನು ತಡೆಹಿಡಿದಿತ್ತು. ಅಲ್ಲದೇ ಆದೇಶವನ್ನು 2021ರ ಸಾಲಿಗೂ ವಿಸ್ತರಣೆಯನ್ನು ಮಾಡಿತ್ತು. ಆದರೆ ರಾಜ್ಯ ಸರಕಾರದ ಈ ಆದೇಶವನ್ನು ರದ್ದುಗೊಳಿಸುವಂತೆ ರಾಜ್ಯ ಸರಕಾರಿ ನೌಕರರ ಸಂಘ ಒತ್ತಡವನ್ನು ಹೇರಿತ್ತು.

ಈ ಹಿನ್ನೆಲೆಯಲ್ಲಿ ಕಡತ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರಕಾರಿ ನೌಕರರ ಕೋರಿಕೆಯಂತೆ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದ್ದಾರೆ.ಮುಖ್ಯಮಂತ್ರಿಗಳ ಈ ತೀರ್ಮಾನದಿಂದಾಗಿ ಸರಕಾರಿ ನೌಕರರಿಗೆ ವಾರ್ಷಿಕ 700 ಕೋಟಿ ರೂಪಾಯಿ ಸಂದಾಯವಾಗಲಿದೆ.

ಅಲ್ಲದೇ ರಜೆ ನಗದೀಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕೈಗೊಂಡ ನಿರ್ಧಾರಕ್ಕೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments