Saturday, June 3, 2023
Homeಕರಾವಳಿಸೋಮೇಶ್ವರ ಸಮುದ್ರ ತೀರದಲ್ಲಿ ಅಲೆಗಳ ಮೇಲೆ ನೀಲಿ ಬೆಳಕು

ಸೋಮೇಶ್ವರ ಸಮುದ್ರ ತೀರದಲ್ಲಿ ಅಲೆಗಳ ಮೇಲೆ ನೀಲಿ ಬೆಳಕು

- Advertisement -


Renault

Renault
Renault

- Advertisement -

ಉಳ್ಳಾಲ : ಸೋಮೇಶ್ವರ ಸಮುದ್ರ ತೀರದಲ್ಲಿ ನೀಲಿ ತೆರೆಗಳು ನೋಡುಗರನ್ನು ಆಕರ್ಷಿಸುತ್ತಿದೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು ಕಾಣಿಸಿಕೊಳ್ಳುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಹರಡುತ್ತಿದ್ದಂತೆ, ಸೋಮೇಶ್ವರ ಸಮುದ್ರ ತೀರದಲ್ಲಿ ಜನ ಜಮಾಯಿಸಿ ನೀಲಿ ಬೆಳಕು ದಡಕ್ಕೆ ಅಪ್ಪಳಿಸುವುದನ್ನು ಕಂಡು ಬೆರಗಾದರು.

ಉಳ್ಳಾಲ, ಮುಕ್ಕಚ್ಚೇರಿ, ಸೋಮೆಶ್ವರ, ಉಚ್ಚಿಲ, ತಲಪಾಡಿ ಭಾಗಗಳಲ್ಲಿ ಸಮುದ್ರದ ಅಲೆಗಳಲ್ಲಿ ನೀಲಿ ಬೆಳಕು ಕಾಣಿಸಿಕೊಂಡಿದೆ. ಹಲವು ದಿನಗಳಿಂದ ಬೆಳಕು ಕಾಣುತ್ತಿದ್ದರೂ, ಕಾರವಾರ ಮಲ್ಪೆ ಸಮುದ್ರ ತೀರದ ಬೆಳಕಿನ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಉಳ್ಳಾಲ ಭಾಗದಲ್ಲಿಯೂ ಕುತೂಹಲಿಗರು ಸಮುದ್ರ ತೀರದಲ್ಲಿ ತಡರಾತ್ರಿವರೆಗೂ ಉಳಿದು ಅಲೆಗಳ ಜತೆಗೆ ನೀಲಿಬೆಳಕಿನ ಆಟವನ್ನು ಮೊಬೈಲ್ ಹಾಗೂ ಕ್ಯಾಮ್ಯರಗಳ ಮೂಲಕ ಸೆರೆಹಿಡಿದರು.

ವೈಜ್ಞಾನಿಕ ಕಾರಣ ಹಲವು ಇದ್ದರೂ, ಈ ಕುರಿತು ತಲೆಕಡೆಸಿಕೊಳ್ಳದ ಜನತೆ ಸಮುದ್ರದ ವಿಹಂಗಮ ನೋಟವನ್ನು ಕಂಡು ಬೆರಗಾದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments